ಭೋಪಾಲ್​:ಕ್ಷೌರದ ಅಂಗಡಿ ತೆರೆಯಲು ಸಹಾಯ ಕೇಳಿದವನೊಬ್ಬನಿಗೆ ಸಚಿವರು ವಿಭಿನ್ನವಾಗಿ ಸಹಾಯ ಮಾಡಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾದ ಗುಲೈಮಾಲ್​​ನಲ್ಲಿ ಘಟನೆ ನಡೆದಿದೆ.
ಅರಣ್ಯ ಸಚಿವ ವಿಜಯ್​ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೋಹಿದಾಸ್​ ಎಂಬಾತ, ಅಲ್ಲೇ ತನಗೊಂದು ಕ್ಷೌರದ ಅಂಗಡಿ ತೆರೆಯಬೇಕು. ಆರ್ಥಿಕ ಸಹಾಯ ಮಾಡಿ ಎಂದು ಬೇಡಿಕೆ ಇಟ್ಟ. ಆಗ ಸಚಿವರು ಆತನನ್ನು ವೇದಿಕೆಗೆ ಕರೆದು, ಇಲ್ಲೇ ಕೂದಲು ನನ್ನ ಕೂದಲು ಕತ್ತರಿಸು ಮತ್ತು ಶೇವ್​ ಮಾಡು. ನಿನ್ನ ಕೌಶಲವನ್ನು ನೋಡುತ್ತೇನೆ ಎಂದು ಹೇಳಿದರು.  ಆತ ತಡ ಮಾಡದೆ ಸಚಿವರಿಗೆ ವೇದಿಕೆಯ ಮೇಲೆಯೇ ಕ್ಷೌರ ಮಾಡಿದ್ದಾನೆ. ಅವನ ಕೆಲಸದಿಂದ ಸಂತೃಪ್ತಿ ಹೊಂದಿದ ಸಚಿವರು ಸ್ಥಳದಲ್ಲೇ 60,000 ರೂ.ನೀಡಿದ್ದಾರೆ.ಇದನ್ನೂ ಓದಿ:ಮುಂಜಾನೆ 4ಗಂಟೆಗೆ ಮನೆಯೊಳಗೆ ನುಗ್ಗಿದ…; ಮುಂದೆ ಆಗಿದ್ದೆಲ್ಲ ದುರಂತ
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಕೆಲವು ತಿಂಗಳುಗಳಿಂದ ಅನೇಕ ಜನರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ದೃಷ್ಟಿಯಿಂದ ಇಲ್ಲೇ ಸ್ಥಳದಲ್ಲೇ ಕ್ಷೌರ ಮಾಡಿಸಿಕೊಂಡೆ. ಅನೇಕರು ಸಲೂನ್​ಗಳಿಗೆ ಹೋಗಲು ಹೆದರುತ್ತಿದ್ದಾರೆ. ಆದರೆ ಅಲ್ಲಿಯೂ ಕೂಡ ಕೊವಿಡ್​-19 ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಧೈರ್ಯವಾಗಿ ಹೋಗಬಹುದು ಎಂದು ಹೇಳಿದ್ದಾರೆ.
ಸಣ್ಣ ಉದ್ದಿಮೆ ಪ್ರಾರಂಭ ಮಾಡುವವರಿಗೆ ಸರ್ಕಾರದ ವತಿಯಿಂದ ಸಾಲ ಸೌಕರ್ಯವಿದೆ. ಅದರ ಬಡ್ಡಿಯನ್ನು ಸರ್ಕಾರ ತುಂಬುತ್ತದೆ. ಮೂಲ ಮೊತ್ತವನ್ನು ಮಾತ್ರ ಸಾಲ ಪಡೆದವರು ಪಾವತಿ ಮಾಡಬೇಕು ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್​)
‘ಬಹುತೇಕ ಕಿಂಗ್​​ಪಿನ್​ಗಳು ಬಿಜೆಪಿಗರು, ಹಾಗಾಗಿ ತನಿಖೆಯನ್ನು ಎನ್​ಸಿಬಿಯೇ ನಡೆಸಲಿ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
