ಆಗ್ರಾ:ವರದಕ್ಷಿಣೆಯಲ್ಲಿ ಕಾರು​ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಮದುವೆಯಾದ ಎರಡೇ ಘಂಟೆಗಳಲ್ಲಿ ತನ್ನ ಪತ್ನಿಗೆ ತಲಾಖ್​ ನೀಡಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಈ ಸಂಬಂಧ ವಧುವಿನ ಅಣ್ಣ ಕಮ್ರಾನ್​ ವಾಸಿ ನೀಡಿದ ದೂರಿನ ಮೇರೆಗೆ ಪೊಲೀಸರು ವರ ಮೊಹಮ್ಮದ್​ ಆಸಿಫ್​ ಸೇರಿದಂತೆ ಆರು ಮಂದಿ ಪ್ರಕರಣ ದಾಖಲಿಸಿಕೊಂಡು FIR ಸಿದ್ದಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್​ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ಗೌರಿ ತನ್ನ ಗಂಡನ ಮನೆಯವರ ಜೊತೆ ಹೊರಟು ಹೋಗಿದ್ದು, ಡಾಲಿಯ ಪತಿ ಮೊಹಮ್ಮದ್​ ಆಸಿಫ್​ ತನಗೆ ವರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ.
ಇದನ್ನೂ ಓದಿ:ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ, ಆ್ಯಸಿಡ್​ ಎರಚಿ ಹತ್ಯೆ
ಈ ಸಂಬಂಧ ವರನ ಕಡೆಯವರು ತಗಾದೆ ತೆಗೆದಿದ್ದು, ಕಾರನ್ನು ಕೊಡಿಸುವಂತೆ ಹೇಳಿದ್ದಾರೆ. ಇಲ್ಲವಾದಲ್ಲಿ ತಕ್ಷಣವೇ ಐದು ಲಕ್ಷ ರೂಪಾಯಿ ಹಣವನ್ನು ಕೊಡುವಂತೆ ಸೂಚಿಸಿದ್ದಾರೆ. ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಕುಪಿತಗೊಂಡ ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್​ ಹೇಳಿಸಿ ಹೊರಟು ಹೋಗಿದ್ದಾರೆ.
ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದ್ದು, ವರ ಮೊಹಮ್ಮದ್​ ಅಸಿಫ್​ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದು ವಧುವಿನ ಸಹೋದರ ಕಮ್ರಾನ್​ ವಾಸಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
