ಮುಂಬೈ:ತ್ರಿವಳಿ ತಲಾಖ್​ ನಿಷೇಧಿಸಿ ವರ್ಷಗಳೇ ಕಳೆದಿವೆ. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮದುವೆಯಾಗಿದ್ದ ವ್ಯಕ್ತಿಯೊಬ್ಬ 10 ಹೆಣ್ಣು ಮಕ್ಕಳ ಜತೆಗೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಪತ್ನಿಗೆ ತಲಾಖ್​ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಇದನ್ನೂ ಓದಿ:ಬೀಗರ ಊಟದಲ್ಲಿ ಮಾಂಸಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿ ಸಾವು
ಬುಲ್ಧಾನ ಜಿಲ್ಲೆಯಲ್ಲಿ ಇಂತದ್ದೊಂದು ಪ್ರಕರಣ ವರದಿಯಾಗಿದೆ. ಮೊಹ್ಶಿನ್​ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಳು. ಮದುವೆಗೂ ಮೊದಲು ಆಕೆಯ ಪತಿಗೆ ಅಕ್ರಮ ಸಂಬಂಧವಿತ್ತಂತೆ. ಮದುವೆಯಾದ ಮೇಲೂ ಆ ಸಂಬಂಧಗಳು ಮುಂದುವರಿದಿವೆ. ಮೊಹ್ಶಿನ್​ ಅದೆಷ್ಟೇ ಹೇಳಿದರೂ ಆತ ಕೇಳಿಲ್ಲ. ಒಂದು ದಿನ ಇದೇ ವಿಚಾರದಲ್ಲಿ ಜಗಳವಾಗಿದೆ. ಆಗ ಸಿಟ್ಟಿಗೆದ್ದ ಪತಿರಾಯ, ‘ನಾನು ನಿನಗೊಬ್ಬಳಿಗೇ ಸೇರಿದವನಲ್ಲ. ನಾನು ಇನ್ನೂ 10 ಹೆಣ್ಣು ಮಕ್ಕಳಿಗೆ ಸೇರಿದವನು’ ಎಂದು ಚೀರಾಡಿದ್ದಾನೆ. ಹಾಗೆಂದವನೇ ಮೂರು ಬಾರಿ ತಲಾಖ್​ ಹೇಳಿ ಎಲ್ಲಿಂದ ಹೊರಟು ಹೋಗಿದ್ದಾನೆ.
ಇದನ್ನೂ ಓದಿ:2 ತಿಂಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕ ಸೇವೆಗೆ: ದಶಕದ ಕನಸು ನನಸಾಗುವ ಕಾಲ ಸನಿಹ
ಗಂಡನ ಈ ನಡವಳಿಕೆಯಿಂದ ಮೊಹ್ಶಿನ್​ ಅಘಾತಕ್ಕೆ ಒಳಗಾಗಿದ್ದಾಳೆ. ಸ್ವಲ್ಪ ಸುಧಾರಿಸಿಕೊಂಡ ನಂತರ ಪೊಲೀಸ್​ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

‘ಬೇಗ ಸಾಯ್ಬೇಕಾ? ಹಾಗಾದರೆ ನೇಣು ಹಾಕ್ಕೋ!’ ವಿಡಿಯೋ ಕಾಲ್​ನಲ್ಲೇ ಪ್ರಿಯತಮೆಯನ್ನು ಕೊಂದ ಪ್ರೇಮಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 1 =
Remember me
