ಬೆಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆಗುವ ಹೆಚ್ಚಿನ ವಿಡಿಯೋಗಳು ನೃತ್ಯ ಇಲ್ಲವೇ, ವಿಚಿತ್ರ ಚಟುವಟಿಕೆಗಳಿಂದ ಕೂಡಿರುತ್ತವೆ. ಇಂತಹ ಕೆಲವು ವಿಡಿಯೋಗಳನ್ನು ನೋಡಿದ ಜನರಿಗೆ ನಗು ತಡೆಯಲಾಗುವುದಿಲ್ಲ. ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನಂತರ ಜನರು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಹಲವು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂತೀರಾ?, ಜನರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕಾರು ಮತ್ತು ಬೈಕ್ ಅನ್ನು ಸುರಕ್ಷಿತವಾಗಿ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸುವ ವಿಚಾರ ಗೊತ್ತಿರುವುದೇ, ಹಾಗೆಯೇ ಮನೆಯ ಹೊರಗಿರುವ ವಸ್ತುಗಳನ್ನು ಸರಪಳಿಗಳಂತಹ ಬಲವಾದ ವಸ್ತುಗಳಿಂದ ಕಟ್ಟಲಾಗುತ್ತದೆ. ಆದರೆ ಈ ವ್ಯಕ್ತಿ ಮಾತ್ರ ಭದ್ರತೆಯ ಎಲ್ಲ ಮಿತಿಗಳನ್ನು ದಾಟಿದ್ದಾನೆ.
ಹೌದು, ವೈರಲ್ ಆಗಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಮನೆಯ ಗೋಡೆಗೆ ಕೂಲರ್ ಅಳವಡಿಸಿದ್ದಾನೆ. ಮನೆಯೊಳಗೆ ಅರ್ಧ ಕೂಲರ್ ಕಾಣಿಸಿದರೆ ಉಳಿದರ್ಧ ಮನೆಯ ಹೊರಗೆ ಕಾಣಿಸುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಕೂಲರ್‌ಗಳನ್ನು ಸರಪಳಿಗಳಿಂದ ಭದ್ರಪಡಿಸುವುದನ್ನು ನೀವು ಇಲ್ಲಿಯವರೆಗೆ ನೋಡಿರಬೇಕು. ಆದರೆ ಈ ವಿಡಿಯೋ ನೋಡಿದರೆ ಆ ವ್ಯಕ್ತಿ ಒದಗಿಸಿರುವ ಭದ್ರತೆ ನಿಮ್ಮನ್ನು ದಂಗಾಗಿಸುತ್ತದೆ.
ಇಲ್ಲಿದೆ ನೋಡಿ ವಿಡಿಯೋ…
A post shared by Gagan Sandhu (@gagansandhu.____)

ಈ ವಿಡಿಯೋವನ್ನು ಇನ್​​​ಸ್ಟಾಗ್ರಾಂನಲ್ಲಿ gagansandu.____ ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವ ತನಕ ಈ ವಿಡಿಯೋವನ್ನು 3.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 1 ಲಕ್ಷ 30 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ವಿಡಿಯೋಗೆ ಬಳಕೆದಾರರು “ಬಹಳಷ್ಟು ಕಳ್ಳತನವಾಗಿರುವುದರಿಂದ Z+ ಭದ್ರತೆಯಾಗಿದೆ”, “ಇದನ್ನು ಗೋಡೆಯಲ್ಲಿ ಸಿಲುಕಿಕೊಳ್ಳುವುದು ಎಂದು ಕರೆಯಲಾಗುತ್ತದೆ”, “ಮಧ್ಯಮ ವರ್ಗದ ಜನರ ಎಸಿ, ವಿಂಡೋ ಕೂಲರ್ ಅನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದಾರೆ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಡೀಪ್‌ಫೇಕ್ ಲೋಕಸಭೆ ಚುನಾವಣೆಗೆ ದೊಡ್ಡ ಅಪಾಯ; ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − nine =
Remember me
