ಚೆನ್ನೈ:ಹೊಸದಾಗಿ ನಿರ್ಮಾಣ ಮಾಡಿದ ಮನೆಯನ್ನು ಪ್ರವೇಶಿಸುವ ಮುನ್ನ ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳದಿರಲಿ ಎಂದು ಹುಂಜವನ್ನು ಬಲಿ ಕೊಡಲು ಹೋದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 70 ವರ್ಷದ ಕಾರ್ಮಿಕ ರಾಜೇಂದ್ರನ್​ ಎಂದು ಗುರುತಿಸಲಾಗಿದೆ. ಪಲ್ಲವರಂ ಬಳಿಯ ಪೊಜಿಚಲೂರ್ ಪ್ರದೇಶದಲ್ಲಿ ಟಿ. ಲೋಕೇಶ್​ ಎಂಬುವರು ಹೊಸ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಿಕೊಡಲು ರಾಜೇಂದ್ರನ್​ ಎಂಬುವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು.
ಪೂಜೆ ನೆರವೇರಿಸಿ ರಾಜೇಂದ್ರನ್​ ವಾಪಸ್‌ ಬಾರದೆ ಇದ್ದಾಗ, ಲೋಕೇಶ್‌ ಅವರನ್ನು ಹುಡುಕಿಕೊಂಡು ಹೋದರು. ಈ ವೇಳೆ ಕಟ್ಟಡಕ್ಕೆ ಲಿಫ್ಟ್‌ ಅಳವಡಿಸಲು ತೋಡಿದ್ದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ರಾಜೇಂದ್ರನ್​ ಬಿದ್ದಿರುವುದನ್ನು ಕಂಡು ದಿಗ್ಭ್ರಾಂತರಾದರು. ಹುಂಜವನ್ನು ಬಲಿ ಕೊಡಲು ಮೂರನೇ ಮಹಡಿಗೆ ಹೋದ ಸಂದರ್ಭದಲ್ಲಿ ಅಲ್ಲಿಂದ ಹಳ್ಳಕ್ಕೆ ಬಿದ್ದು ರಾಜೇಂದ್ರನ್​ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹುಂಜ ಬದುಕುಳಿದಿದೆ. ರಾಜೇಂದ್ರನ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಯುವಿ ದಾಖಲೆ ಮುರಿದಿದ್ದರ ಬಗ್ಗೆ ನಿಮಗೆ ಏನನಿಸುತ್ತೆ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು…

ರಾತ್ರೋರಾತ್ರಿ ಅಡಕೆ ತೋಟವನ್ನ ನಾಶ ಮಾಡಿದ ದುಷ್ಕರ್ಮಿಗಳು! ಜಮೀನಿನಲ್ಲೇ ಬಿದ್ದು ಗೋಳಾಡಿದ ರೈತ…

ಚಿನ್ನದ ಸರ ಕಸಿದು ಎಸ್ಕೇಪ್ ಆಗ್ತಿದ್ದ ಕಳ್ಳನನ್ನು ಹಿಡಿಯುವಾಗ ಪೊಲೀಸ್​ ಅಧಿಕಾರಿಗೆ ಕಚ್ಚಿದ ನಾಗರಹಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
