ಪಂಜಾಬ್​:ಈತನಿಗೆ ಲಾಟರಿ ಖರೀದಿಸುವ ವ್ಯಸನ ಅಂಟಿಕೊಂಡಿದ್ದು, ನಿನ್ನೆ ಮೊನ್ನೆಯಿಂದಲ್ಲ. ಬರೋಬ್ಬರಿ 34 ವರ್ಷಗಳಿಂದಲೂ ಈತ ಲಾಟರಿ ಖರೀದಿಸುತ್ತಲೇ ಇದ್ದ. ಒಂದಲ್ಲ ಒಂದು ದಿನ ಬಂಪರ್ ಪ್ರೈಸ್​ ಬರುತ್ತೆ ಎಂಬ ವಿಶ್ವಾಸದಿಂದಲೇ ನಿರಂತರವಾಗಿ ಲಾಟರಿ ಖರೀದಿಸುತ್ತಿದ್ದ ಈತನಿಗೆ ಕೊನೆಗೂ ಕೋಟ್ಯಂತರ ರೂಪಾಯಿ ಬಹುಮಾನ ಬಂದಿದೆ.
ಪಂಜಾಬ್​ ಬತಿಂಡ ಜಿಲ್ಲೆಯ ರೋಷನ್​ ಸಿಂಗ್​ ಕೊನೆಗೂ ಲಾಟರಿಯಲ್ಲಿ ಬಂಪರ್​ ಪ್ರೈಸ್​ ಗೆದ್ದಿದ್ದು, ಪಂಜಾಬ್​ ರಾಜ್ಯದ ಡಿಯರ್ ಬೈಸಾಖಿ ಬಂಪರ್​ ಲಾಟರಿ 2022ರಲ್ಲಿ ಈತನಿಗೆ 2.5 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.
1987ರಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ ರೋಷನ್​, ಬಳಿಕ ಹಲವರ ಬಳಿ ಕೆಲಸ ಮಾಡಿ ಸ್ವಂತ ಬಟ್ಟೆ ಅಂಗಡಿ ಇರಿಸಿಕೊಂಡಿದ್ದ. 1988ರಿಂದಲೂ ಲಾಟರಿ ಖರೀದಿಸುತ್ತಲೇ ಇರುವ ರೋಷನ್​ಗೆ ಆಗಾಗ 100-200 ರೂ. ಬಹುಮಾನ ಬಂದಿದ್ದು ಬಿಟ್ಟರೆ ಹೆಚ್ಚಿಗೆ ಬಂದಿರಲಿಲ್ಲ. ಅದಾಗ್ಯೂ ಒಂದಲ್ಲ ಒಂದು ದಿನ ಬಂಪರ್ ಬರುತ್ತೆ, ಕಳೆದುಕೊಂಡಿದ್ದ ಹಣವೆಲ್ಲ ವಾಪಸ್​ ಸಿಗುತ್ತೆ ಅಂತ ಈತ ಲಾಟರಿ ಖರೀದಿ ಮುಂದುವರಿಸಿದ್ದ.
18 ವರ್ಷಗಳಿಂದ ಬಟ್ಟೆ ಅಂಗಡಿಯ ಮಾಲೀಕನಾಗಿ ದುಡಿಯುತ್ತಿದ್ದರೂ ಮನಸಿಗೆ ಬಂದಷ್ಟು ಖರ್ಚು ಮಾಡುವಷ್ಟು ಸಂಪಾದನೆ ಇಲ್ಲ ಎಂಬ ಕೊರಗು ರೋಷನ್​ಗಿತ್ತು. ಪತಿಯ ಲಾಟರಿ ಗೀಳು ತಪ್ಪಿಸಲು ಪತ್ನಿ ಸಾಕಷ್ಟು ಪ್ರಯತ್ನ ಮಾಡಿದರೂ ಫಲ ಕೊಟ್ಟಿರಲಿಲ್ಲ.
ಆದರೆ ಇತ್ತೀಚೆಗೆ ರಾಂಪುರ ಫುಲ್​ ಲಾಟರಿ ಸೆಂಟರ್​ನಿಂದ ರೋಷನ್​ಗೆ ಕರೆ ಬಂದಿದ್ದು, 2.5 ಕೋಟಿ ರೂ. ಬಹುಮಾನ ಬಂದಿರುವ ವಿಷಯ ತಿಳಿಯುತ್ತದೆ. ಒಂದಲ್ಲ ಒಂದು ದಿನ ದೊಡ್ಡ ಮೊತ್ತ ಬರುತ್ತೆ, ಕನಿಷ್ಠ 10 ಲಕ್ಷ ರೂ. ಬರುತ್ತೆ ಅಂದುಕೊಂಡಿದ್ದೆ. ಆದರೆ ದೇವರ ದಯೆಯಿಂದ ಬಂಪರ್​ ಬಹುಮಾನ ಬಂದಿವೆ. ಎಲ್ಲ ತೆರಿಗೆ ಕಳೆದು 1.75 ಕೋಟಿ ರೂ. ಸಿಕ್ಕಿದೆ, ಈ ಹಣ ತನ್ನ ಮೂವರು ಮಕ್ಕಳ ಭವಿಷ್ಯಕ್ಕೆ ಬಳಸುವುದಾಗಿ ರೋಷನ್ ಹೇಳಿದ್ದಾನೆ.
ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…

ಸ್ನೇಹಿತನ ಶವ ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಾರ್ಗ ಮಧ್ಯೆ ಸ್ಥಳದಲ್ಲೇ ಸಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + eleven =
Remember me
