ನವದೆಹಲಿ:ವೈದ್ಯರನ್ನು ಮನುಷ್ಯ ರೂಪದ ದೇವರು ಎನ್ನಲಾಗುತ್ತದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಮಷಿನ್​ಗೆ ಸಿಕ್ಕು, ಕೈಯನ್ನು ಎರಡು ತುಂಡು ಮಾಡಿಕೊಂಡಿದ್ದ ಕಾರ್ಮಿಕನೊಬ್ಬನಿಗೆ ವೈದ್ಯರು ನಿಜವಾದ ದೇವರಾದ ಘಟನೆ ನಡೆದಿದೆ.
ಪ್ರಹ್ಲಾದ್​ಪುರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಇಂದ್ರಪಾಲ್​ (36) ಹೆಸರಿನ ಕಾರ್ಮಿಕ ಆಕಸ್ಮಿಕವಾಗಿ ಮಷಿನ್​ ಬಾಯಿಗೆ ಸಿಕ್ಕಿದ್ದಾನೆ. ಆತ ಎಡಗೈ ಎರಡು ತುಂಡಾಗಿ, ಒಂದು ತುಂಡು ಮಷಿನ್​ನ ಎಲ್ಲ ಭಾಗಗಳಿಗೂ ಹೋಗಿ ಬಂದಿದೆ. ಘಟನೆ ಕೇಳಿ ದಂಗಾದ ಕಾರ್ಖಾನೆಯ ಮಾಲೀಕ, ತಕ್ಷಣ ಇಂದ್ರಪಾಲ್​ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ತುಂಡಾಗಿದ್ದ ಕೈಯನ್ನು ಪಾಲಿಥಾನ್​ ಶೀಟ್​ನಲ್ಲಿ ಸ್ವಚ್ಛತೆಯಿಂದ ತೆಗೆದುಕೊಂಡು ಹೋಗಿ ವೈದ್ಯರಿಗೆ ಕೊಡಲಾಗಿದೆ. ವೈದ್ಯರು ಆರು ತಾಸಿನ ಕಾಲ ಆಪರೇಷನ್​ ನಡೆಸಿದ್ದು, ತುಂಡಾಗಿದ್ದ ಕೈಯನ್ನು ದೇಹಕ್ಕೆ ಸೇರಿಸಲಾಗಿದೆ. ಕೈ ಸಾಕಷ್ಟು ಪೆಟ್ಟು ತಿಂದಿದ್ದರಿಂದಾಗಿ ಅದರ ಕೆಲ ಭಾಗವನ್ನು ಕತ್ತರಿಸಲಾಗಿದ್ದು ಕೈ ಸುಮಾರು 7-8 ಇಂಚಿನಚ್ಟು ಚಿಕ್ಕದಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಇಂದ್ರಪಾಲ್​ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಈ ರೀತಿಯ ಕೇಸ್​ನಲ್ಲಿ 3-4 ಗಂಟೆಯೊಳಗೆ ರೋಗಿ ಆಸ್ಪತ್ರೆ ಸೇರಿದರೆ ಆಪರೇಷನ್​ ಮಾಡಬಹುದು. ಸೂಕ್ತ ಸಮಯಕ್ಕೆ ಆತ ಬಂದಿದ್ದರಿಂದಾಗಿ ಆತನ ಕೈಯನ್ನು ಸರಿಮಾಡಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)
ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ನಂತರ ವಕೀಲೆ ನಿಕಿತಾ ಸೇರಿ ಇಬ್ಬರಿಗೆ ವಾರಂಟ್; ಜೂಮ್​ನಲ್ಲೇ ನಡೆದಿತ್ತು ದಾಳಿಯ ಸಂಚು!

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
