ಜೈಪುರ:ಗಂಡ ಹೆಂಡತಿ ಎನ್ನುವುದು ಒಂದು ಪವಿತ್ರ ಬಂಧ. ಈ ಸಂಬಂಧದಲ್ಲಿ ಯಾವುದೇ ಬಿರುಕು ಬಂದರೂ ಪೂರ್ತಿ ಕುಟುಂಬವೇ ನಾಶವಾದಂತೆ ಎನ್ನುತ್ತಾರೆ. ಆದರೆ ಕೆಲವೊಂದು ಕುಟುಂಬದಲ್ಲಿ ಗಂಡ ಹೆಂಡತಿ ಸಂಬಂಧ ಎಷ್ಟು ಕೀಳು ಮಟ್ಟಕ್ಕಿಳಿದು ಬಿಡುತ್ತದೆಯೆಂದರೆ, ಅಂತದ್ದನ್ನು ಊಹೆ ಮಾಡಿಕೊಳ್ಳುವುದೂ ಕಷ್ಟವೆನಿಸಿಬಿಡುತ್ತದೆ.
ಜೀವನ ಪೂರ್ತಿ ಜತೆ ಇರುವ ಪ್ರಮಾಣ ಮಾಡಿ ಕೈ ಹಿಡಿದ ಹೆಂಡತಿಯ ಮೇಲೆ ಸಹೋದ್ಯೋಗಿ ಸ್ನೇಹಿತರ ಜತೆ ಸೇರಿ ಪತಿಯೇ ಗ್ಯಾಂಗ್​ ರೇಪ್​ ಮಾಡಿರುವ ಘಟನೆ ರಾಜಸ್ಥಾನದ ಜಲೋರ್​ನಲ್ಲಿ ನಡೆದಿದೆ. ಒಳ್ಳೆಯ ಅಳಿಯ ಎಂದು ನಂಬಿದ್ದ ವ್ಯಕ್ತಿಯೇ ಮಗಳ ಮೇಲೆ ಈ ರೀತಿಯ ದುಷ್ಕೃತ್ಯ ನಡೆಸಿರುವುದನ್ನು ಕಂಡು ಬೆಚ್ಚಿ ಬಿದ್ದಿರುವ ಸಂತ್ರಸ್ತೆಯ ತಂದೆ ತಾಯಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.
ಸಿರೋಹಿಯ ಮಂದರ್​ನ ಕಂಪನಿಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಆತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಜನವರಿ 12ರಂದು ಸಂಜೆ ಮನೆಗೆ ಬಂದ ಆತ ಹೆಂಡತಿಯನ್ನು ತನ್ನ ಬೈಕ್​ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿದ್ದ ಬಂಗಲೆಯೊಂದಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ, ಆಕೆಯ ಕಾಲುಗಳನ್ನು ಕಬ್ಬಿಣದ ಬಾಗಿಲಿಗೆ ಕಟ್ಟಿದ್ದಾನೆ. ನಂತರ ಕುಡಿದ ಮತ್ತಿನಲ್ಲಿದ್ದ ತನ್ನ ಮೂವರು ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್​ ರೇಪ್​ ಮಾಡಿದ್ದಾನೆ. ಅಲ್ಲಿಂದ ಆಕೆಯನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿದ್ದಾನೆ.
ಆದರೆ ಗ್ಯಾಂಗ್​ರೇಪ್​ನಿಂದಾಗಿ ಅಸ್ವಸ್ಥಳಾಗಿದ್ದ ಮಹಿಳೆ ಹಾಸಿಗೆ ಹಿಡಿದಿದ್ದಾಳೆ. ಮಾರನೇ ದಿನ ಆಕೆಯ ಅಪ್ಪ ಅಮ್ಮ ಮನೆಗೆ ಬಂದಿದ್ದು, ಆಗ ನಡೆದ ವಿಚಾರಗಳು ಅವರಿಗೆ ತಿಳಿದುಬಂದಿದೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಳಿಯನ ವಿರುದ್ಧ ಪೊಲೀಸ್​ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
