ನವದೆಹಲಿ:ಪ್ರೀತಿಯಿಂದ ಸಾಕಿದ್ದ ಅಜ್ಜಿಯ ತಲೆಯನ್ನು ಮೊಮ್ಮಗನೇ ಸುತ್ತಿಗೆಯಿಂದ ಜಜ್ಜಿ ಕೊಂದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​
ದೆಹಲಿಯ ರೋಹ್ತಾಶ್​ ನಗರದಲ್ಲಿ 73 ವರ್ಷದ ಸತೀಶ್​ ಕುಮಾರಿ ವಾಸವಿದ್ದರು. ಒಂದೇ ಬಿಲ್ಡಿಂಗ್​ನಲ್ಲಿ ಗ್ರೌಂಡ್​ ಫ್ಲೋರ್​ನಲ್ಲಿ ತಾಯಿ ವಾಸವಿದ್ದರೆ, ಆಕೆಯ ಮೊದಲನೇ ಮಗ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಡಿಸೆಂಬರ್​ 26ರಂದು ಬೆಳಗ್ಗೆ ಮನೆಯಿಂದ ಕೆಳಗಿಳಿದ ಮಗ ಅಮ್ಮನಿಗಾಗಿ ಹುಡುಕಾಡಿದ್ದಾನೆ. ಆದರೆ ಆಕೆಯಿದ್ದ ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ಈ ರೀತಿ ಅಮ್ಮ ತನಗೆ ಹೇಳದೆಯೆ ಎಲ್ಲೂ ಹೋಗುವುದಿಲ್ಲ ಎಂದು ಅನುಮಾನ ಬಂದ ಮಗ ತನ್ನ ತಮ್ಮನನ್ನೂ ಮನೆಗೆ ಕರೆಸಿದ್ದಾನೆ. ಇಬ್ಬರೂ ಸೇರಿ ಮನೆ ಬಾಗಿಲು ಒಡೆದು ನೋಡಿದ್ದಾರೆ. ಆಗ ಮನೆಯ ಕೋಣೆಯ ಖುರ್ಚಿಯ ಮೇಲೆ ತಾಯಿ ರಕ್ತದ ಮಡುವಿನಲ್ಲಿ ಕುಳಿತಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್: ಕೊರಗಿ ಕೊರಗಿ ಆತ್ಮಹತ್ಯೆಗೆ ಶರಣಾದ ಹುಡುಗ..!
ಅದೇ ಬಿಲ್ಡಿಂಗ್​ನಲ್ಲಿ ವಾಸವಿದ್ದ ಆಕೆಯ 19 ವರ್ಷದ ಮೊಮ್ಮಗ ಶನಿವಾರದಂದು ಅಜ್ಜಿಯ ಬಳಿ ಹಣ ಕೊಡಲು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ತಲೆಯನ್ನು ಸುತ್ತಿಗೆಯಿಂದ ಜಜ್ಜಿ, ಅಲ್ಲಿದ್ದ 18 ಸಾವಿರ ರೂಪಾಯಿ ಹಣವನ್ನು ದೋಚಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತನ ಬಗ್ಗೆ ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ನಡೆದ ವಿಚಾರ ತಿಳಿದುಬಂದಿದೆ. ಸಾಲ ಮಾಡಿಕೊಂಡಿದ್ದ ಆತ ಅದನ್ನು ತೀರಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
