ರೈಸೆನ್​:ಕೋವಿಡ್​ 19 ಸೋಂಕು ತಗುಲದಂತೆ ಎಚ್ಚರವಹಿಸಲು ಆಲ್ಕೋಹಾಲ್​ ಆಧಾರಿತವಾದ ಸ್ಯಾನಿಟೈಸರ್​ ಬಳಸಿ ಕೈ ಸ್ವಚ್ಛಗೊಳಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೀಗ ಲಾಕ್​ಡೌನ್​ನಿಂದಾಗಿ ಮದ್ಯದಂಗಡಿಗಳು ಮುಚ್ಚಿರುವ ಕಾರಣ, ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಲು ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ. ಸ್ಯಾನಿಟೈಸರ್​ ಅನ್ನೇ ಕುಡಿದು ಪ್ರಾಣ ಕಳೆದುಕೊಂಡಿರುವ ಹಲವು ಉದಾಹರಣಗಳೂ ನಮ್ಮ ಮುಂದಿವೆ.
ಇಂಥದ್ದರಲ್ಲಿ ಮಧ್ಯಪ್ರದೇಶನ ರೈಸೆನ್​ನ ನಿವಾಸಿ ಆಲ್ಕೋಹಾಲ್​ ಆಧಾರಿತ ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಿ, ಸಿಕ್ಕಿಬಿದ್ದಿದ್ದಾನೆ. ಈ ತಂತ್ರಜ್ಞಾನ ಆತನಿಗೆ ಎಲ್ಲಿ, ಹೇಗೆ ಸಿಕ್ಕಿತು? ಆತ ಮದ್ಯ ತಯಾರಿಸುವಲ್ಲಿ ಯಶಸ್ವಿಯಾಗಿದ್ದನೇ ಎಂಬ ಮಾಹಿತಿ ಲಭ್ಯವಿಲ್ಲವಾದರೂ ಸದ್ಯ ಈ ಪೊಲೀಸ್​ ಅತಿಥಿಯಾಗಿರುವ ಸುದ್ದಿ ಬಂದಿದೆ.
ಇದನ್ನೂ ಓದಿ:ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!
ಸುಲ್ತಾನಪುರದ ಬೊರಿಯಾ ಜಾಗಿರ್​ ಗ್ರಾಮದ ನಿವಾಸಿ ಇಂಡಾಲ್​ ಸಿಂಗ್​ ರಾಜಪೂತ್​ ಬಂಧಿತ. ಈತ ಶೇ.72 ಆಲ್ಕೋಹಾಲ್​ ಹೊಂದಿರುವ ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸುತ್ತಿದ್ದ ಎಂದು ಸುಲ್ತಾನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದು ತುಂಬಾ ವಿಶಿಷ್ಟವಾದ ಪ್ರಕರಣವಾಗಿದೆ. ಇಂಡಾಲ್​ ಸಿಂಗ್​ ರಾಜಪೂತ್​ ವಿರುದ್ಧ ಅಬಕಾರಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಮೊನಿಕಾ ಶುಕ್ಲಾ ಹೇಳಿದ್ದಾರೆ.
ಮೇ 5ಕ್ಕೆ ಘೋಷಣೆಯಾಗಲಿದೆ ಜೆಇಇ ಮೇನ್​ ಮತ್ತು ನೀಟ್​ ಪರೀಕ್ಷೆ ದಿನಾಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 19 =
Remember me
