ತಿರುವನಂತಪುರ:ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಪತ್ತೆಯಾಗಿರುವ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನದ ಹಿಂದೆ ಒಬ್ಬ ಪ್ರಭಾವಿ ಮಹಿಳೆಯ ಕೈವಾಡ ಇರುವುದು ಇದೀಗ ಬೆಳಕಿಗೆ ಬಂದಿದೆ.
ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಈ ಚಿನ್ನ ಸಿಕ್ಕಿತ್ತು. ಇದನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದರ ಹಿಂದಿರುವುದು ಒಬ್ಬ ಮಹಿಳೆ ಎಂಬುದು ತಿಳಿದುಬಂದಿದೆ.
ಈ ಬ್ಯಾಗ್‌ ತಮಗೆ ಸೇರಿದ್ದು ಎಂದು ಹೇಳಿಕೊಂಡು ಬಂದಿದ್ದ ಒಬ್ಬರ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದರು. ಕಾನ್ಸುಲೇಟ್‌ನೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಸರಿತ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಕೂಡ ಇದರ ಹಿಂದೆ ಇದ್ದಾರೆ ಎನ್ನುವುದು ಪತ್ತೆಯಾಗಿತ್ತು.
ಇದನ್ನೂ ಓದಿ:ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!
ತಾವು ತಿರುವನಂತಪುರದ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿ ಎಂದು ಮಹಿಳೆ ಹೇಳಿಕೊಂಡಿದ್ದರು. ಇವರ ಹೆಸರು ಸ್ವಪ್ನಾ ಸುರೇಶ್‌. ಈಕೆ ಬಗ್ಗೆ ವಿಚಾರಿಸಿದಾಗ ಐಟಿ ಇಲಾಖೆಯು ಸ್ವಪ್ನಾ ಸುರೇಶ್‌ ಅವರು ಕೇರಳದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನೊಂದಿಗೆ ಕಾರ್ಯಾಚರಣಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರು ಆರು ತಿಂಗಳ ನಂತರ ಅವರ ಸೇವೆಯನ್ನು ಕೊನೆಗೊಳಿಸಲಾಗಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರು ಸೇವೆ ಮುಂದುವರೆಸಿದ್ದರು ಎಂದು ಹೇಳಿದೆ.
ಈ ಹಿಂದೆ ಸ್ವಪ್ನಾ ಸುರೇಶ್ ತಿರುವನಂತಪುರದ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲೇಟ್‌ನಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಈ ಚಿನ್ನದ ವ್ಯವಹಾರದ ಹಿಂದೆ ಅವರ ಕೈವಾಡ ಇದೆ ಎಂಬ ಗುಮಾನಿ ಇದೀಗ ದಟ್ಟವಾಗಿದೆ.
ಈ ನಡುವೆ, ಚಿನ್ನದ ಕಳ್ಳಸಾಗಣೆ ದಂಧೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯೊಂದಿಗೆ ಸಂಬಂಧವಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.’ಕಳ್ಳಸಾಗಾಣಿಕೆದಾರರನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಂತೆ ಮೊದಲ ಕರೆ ಮುಖ್ಯಮಂತ್ರಿ ಕಚೇರಿಯಿಂದ ಬಂದಿದೆ. ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಸನಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಅವರು ಐಟಿ ಕಾರ್ಯದರ್ಶಿಯೂ ಆಗಿದ್ದಾರೆ” ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಲಾಕ್‌ಡೌನ್‌ ತಂದ ಅದೃಷ್ಟ: ಮೂರೇ ತಿಂಗಳಲ್ಲಿ ಕೋಟ್ಯಧಿಪತಿ!
ಯುಎಇ ಕಾನ್ಸುಲೇಟ್‌ನಿಂದ ಹೊರಹಾಕಲ್ಪಟ್ಟ ಸ್ವಪ್ನಾ ಅವರಂತಹ ವ್ಯಕ್ತಿ ಹೇಗೆ ಮುಖ್ಯ ಹುದ್ದೆಯಲ್ಲಿ ಮುಖ್ಯಮಂತ್ರಿ ಕಚೇರಿಗೆ ಸೇರಬಹುದು ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. “ಏರ್ ಇಂಡಿಯಾ ಅಧಿಕಾರಿಯ ವಿರುದ್ಧದ ಪ್ರಕರಣದಲ್ಲಿ ದಾಖಲೆಗಳನ್ನು ನಕಲಿ ಮಾಡಿದ್ದಕ್ಕಾಗಿ ಅಪರಾಧ ವಿಭಾಗವು ಅವಳನ್ನು ಪ್ರಶ್ನಿಸಿದ್ದರಿಂದ ರಾಜ್ಯ ವಿಶೇಷ ಶಾಖೆ ಸಿಎಂಗೆ ತನ್ನ ಹಿನ್ನೆಲೆ ಬಗ್ಗೆ ತಿಳಿಸಿತ್ತು. ಆದರೆ, ಈ ಎಲ್ಲವನ್ನು ಅವರು ತಿರಸ್ಕರಿಸಿದ್ದಾರೆ” ಎಂದು ಅವರು ಹೇಳಿದರು.
ಆದರೆ ಈ ಆರೋಪವನ್ನು ವಿಜಯನ್‌ ತಳ್ಳಿಹಾಕಿದ್ದಾರೆ. ಮಹಿಳೆಯ ನೇಮಕಾತಿಯ ಹಿಂದಿನ ಅಂಶಗಳ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ. “ಕಳ್ಳಸಾಗಣೆ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಿ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ತಂಡವನ್ನು ನಾನು ಅಭಿನಂದಿಸುತ್ತೇನೆ. ಎಂದಿದ್ದಾರೆ.(ಏಜೆನ್ಸೀಸ್‌‌)
ಮದುಮಕ್ಕಳಿಗೆ ಭಾರಿ ಶಾಕ್‌- ಸಾರ್ವಜನಿಕ ಮದುವೆ ಬ್ಯಾನ್‌- ಎಲ್ಲೆಲ್ಲಿ ಗೊತ್ತಾ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:12 − nine =
Remember me
