ನವದೆಹಲಿ:ಸ್ಮಗ್ಲಿಂಗ್​ ಮಾಡಲು ಸ್ಮಗ್ಲರ್​ಗಳು ಕಂಡುಕೊಳ್ಳುವಂತಹ ದಾರಿಗಳು ಎಷ್ಟು ಅಚ್ಚರಿಗೊಳಿಸುತ್ತದೆ ಎಂಬುದಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ನಡೆದ ಪ್ರಕರಣವೊಂದು ಇದಕ್ಕೆ ಉದಾಹರಣೆಯಾಗಿದೆ. ಹಾಗೇ ಕಳ್ಳರು ಚಾಪೆಗೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೇ ನುಸುಳುತ್ತಾರೆ ಎಂಬುದಕ್ಕೂ ಇದು ಸ್ಪಷ್ಟ ನಿದರ್ಶನವಾಗಿದೆ.
ಸುಮಾರು 45 ಲಕ್ಷ ರೂ. ಮೌಲ್ಯದ ವಿದೇಶಿ ಹಣವನ್ನು ಸ್ಮಗ್ಲಿಂಗ್​ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೇಂದ್ರಿಯ ಕೈಗಾರಿಕ ಭದ್ರತಾ ಪಡೆ(ಸಿಐಎಸ್​ಎಫ್​) ಇಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತ ಸ್ಮಗ್ಲಿಂಗ್​ ಮಾಡಲು ಕಂಡುಕೊಂಡು ದಾರಿ ಸಿಐಎಸ್​ಎಫ್ ಸಿಬ್ಬಂದಿಯ ಹುಬ್ಬೇರಿಸಿದೆ.
ಆರೋಪಿ ಪ್ರಯಾಣಿಕನನ್ನು ಮುರಾದ್​ ಆಲಂ ಎಂದು ಗುರುತಿಸಲಾಗಿದೆ. ಕಡಲೆಕಾಯಿ, ಬಿಸ್ಕೆಟ್​ ಹಾಗೂ ಇತರೆ ಆಹಾರ ಪದಾರ್ಥಗಳ ಜತೆಯಲ್ಲಿ ವಿದೇಶಿ ಹಣ ಸಾಗಿಸುತ್ತಿದ್ದ.

ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಸಿಐಎಸ್​ಎಫ್​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿರುವಂತೆ ಕಡಲೆಕಾಯಿಯ ಸಿಪ್ಪೆಯನ್ನು ಬಿಡಿಸಿದರೆ, ಕಡಲೆಬೀಜದ ಬದಲಿಗೆ ಕರೆನ್ಸಿ ನೋಟುಗಳನ್ನು ವೃತ್ತಾಕಾರದಲ್ಲಿ ಸುತ್ತಿ ಇಟ್ಟಿರುವುದನ್ನು ಕಂಡು ಸಿಐಎಸ್​ಎಫ್​ ಸಿಬ್ಬಂದಿ ದಂಗಾಗಿದ್ದಾರೆ.
ಆಹಾರ ಪದಾರ್ಥಗಳನ್ನು ಬಿಡಿಸಿದಾಗಲೂ ಅದರೊಳಗೆ ಕಪ್ಪು ಹಣವಿರುವುದು ಪತ್ತೆಯಾಗಿದೆ. ದುಬೈಗೆ ಹಾರುತ್ತಿದ್ದ ಆರೋಪಿಯನ್ನು ಸಿಐಎಸ್​ಎಫ್​ ಸಿಬ್ಬಂದಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಲೆಗೆ ಹಾಕಿಕೊಂಡಿದ್ದಾರೆ. ಆತನನ್ನು ಕಸ್ಟಮ್ಸ್​ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.(ಏಜೆನ್ಸೀಸ್​)
Vigilant#CISFpersonnel apprehended a passenger namely Mr Murad Alam carrying high volume of foreign currency worth approx. INR 45 lakh concealed in peanuts, biscuit packets & other eatable items kept inside his baggage @ IGI Airport, Delhi. Passenger was handed over to customs.pic.twitter.com/AJgO6x4WjN
— CISF (@CISFHQrs)February 12, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − twelve =
Remember me
