ಲಖನೌ:ಮನೆಯಲ್ಲಿ ನಡೆದ ಸಣ್ಣ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಹೆಂಡತಿ ಮತ್ತು ನಾಲ್ಕು ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ.
ಗುಲ್ಫಮ್​ (30)ಗೆ ಮುಸ್ಕನ್​ (22) ಮೂರನೇ ಹೆಂಡತಿಯಾಗಿದ್ದಳು. ದಂಪತಿಗೆ ಆಯತ್ (4) ಹೆಸರಿನ ಮಗಳಿದ್ದು, ಇನ್ನೊಂದು ಮಗು ಮುಸ್ಕನ್​ ಗರ್ಭದಲ್ಲಿ ಬೆಳೆಯುತ್ತಿತ್ತು. ಗುಲ್ಫಮ್​ ನಗರದಲ್ಲಿ ಕ್ಷೌರದಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಆತ ಕ್ಯಾನ್ಸರ್​ನಿಂದ ಬಳಲುತ್ತಿದ್ದನಂತೆ.
ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತಂತೆ. ಸೋಮವಾರದಂದೂ ಅದೇ ರೀತಿಯ ಜಗಳವಾಗಿದ್ದು, ಗುಲ್ಫಮ್​ ಹೆಂಡತಿ ಮತ್ತು ಮಗಳ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸ್​ ಠಾಣೆಗೆ ಬಂದು ನಡೆದ ಘಟನೆ ತಿಳಿಸಿ, ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)
ಹೇರ್​ ಸ್ಪ್ರೇ ಖಾಲಿಯೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಬೆಡಗಿ! ಮುಂದೇನಾಯ್ತು ನೀವೇ ನೋಡಿ..

ಈ ನೂರು ಆ್ಯಪ್​ಗಳನ್ನು ಹಾಗೇ ಬಿಟ್ಟಿದ್ದಿದ್ದರೆ ಅದೆಷ್ಟು ಜನ ಹಣ ಕಳೆದುಕೊಂಡಿರುತ್ತಿದ್ದರೋ?!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 16 =
Remember me
