ನವದೆಹಲಿ:ಹಾವುಗಳು ಎಂದರೆ ಸಾಕು ನಮ್ಮಲ್ಲಿ ಇಂದಿಗೂ ಅನೇಕರಲ್ಲಿ ವಿಪರೀತ ಭಯ ಆವರಿಸಿಕೊಳ್ಳುತ್ತದೆ. ಹಾವು ಕಂಡರೆ ಸಾಕು ಅದೆಷ್ಟೋ ದೂರದಲ್ಲಿ ನಿಂತು ನೋಡುವವರು ಸಾಕಷ್ಟು ಮಂದಿಯಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ವಿವಿಧ ಬಗೆಯ ಹಾವುಗಳನ್ನು ಕಿಂಚಿತ್ತು ಹೆದರದೆ, ಕೈಯಲ್ಲಿಡಿದು ವೇದಿಕೆಯ ಮೇಲೆ ಪ್ರದರ್ಶಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.
ಇದನ್ನೂ ಓದಿ:ಪಾಕ್​ನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​ ರೈಲು: 15 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಪ್ರಭಾಕರನ್​ ಜಾನ್​ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ದೃಶ್ಯ ಪೋಸ್ಟ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯಚಕಿತರಾಗಿದ್ದಾರೆ. ಯಾವುದೋ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ವ್ಯಕ್ತಿ, ತನ್ನ ಅಂಗಿಯನ್ನು ಕಳಚಿದ್ದಾನೆ.

A post shared by John Prabakaran (@prabakaran_john)
ತದನಂತರ ಬ್ಯಾಗ್​​ನಲ್ಲಿದ್ದ ಹಾವುಗಳನ್ನು ತೆರೆದು, ಕೈಯಲ್ಲಿ ಹಿಡಿದು, ನೆರದಿದ್ದ ಜನರ ಮುಂದೆ ಪ್ರದರ್ಶಿಸಿದ್ದಾನೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರು ಈತನ ಧೈರ್ಯವನ್ನು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್).
ಕವಿ, ಜಾನಪದ ಗಾಯಕ ‘ಗದ್ದರ್’ ಇನ್ನಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
