ಮಹಾರಾಷ್ಟ್ರ:ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (National Security Guard (NSG)) ಸೋಗಿನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ರ‍್ಯಾಲಿಯ ವಿವಿಐಪಿ ವಿಭಾಗಕ್ಕೆ ಒಳನುಸುಳಲು ಯತ್ನಿಸಿದ್ದಾನೆ. ಸದ್ಯ ಈತನನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಬಳಿ ಪೊಲೀಸರು ಬಂಧಿಸಿದ್ದಾರೆ. ರಾಮೇಶ್ವರ್​ ಮಿಶ್ರಾ ಬಂಧಿತ ವ್ಯಕ್ತಿ ಎಂದು ವರದಿಯಾಗಿದೆ.
ಬಂಧಿತ ರಾಮೇಶ್ವರ್ ಮಿಶ್ರಾ ಎನ್​ಎಸ್​ಜಿ ಕಮಾಂಡೋ ಎಂದು ನಕಲಿ ಗುರುತಿನ ಚೀಟಿ ಬಳಸಿ ವಿವಿಐಪಿ ವಿಭಾಗಕ್ಕೆ ಪ್ರವೇಶಿಸಲು ಯತ್ನಿಸಿದ್ದ. ತಾನು ಭಾರತೀಯ ಸೇನೆಯ ಗಾರ್ಡ್ಸ್ ರೆಜಿಮೆಂಟ್‌ನ ಸೈನಿಕ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಅನುಮಾನ ಬಂದ ಪೊಲೀಸರು ತಡೆದಿದ್ದಾರೆ. ಈ ವೇಳೆ ನಕಲಿ ಕಾರ್ಡ್ ಬಳಸಿ ಒಳಬರಲು ಯತ್ನಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಮೈದಾನದ ಪ್ರವೇಶ ದ್ವಾರದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯ ತಂಡ ಮಿಶ್ರಾ ಅವರನ್ನು ಬಂಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ತಲುಪುವ 90 ನಿಮಿಷಗಳ ಮೊದಲು ರಾಮೇಶ್ವರ್​ ಮಿಶ್ರಾನ ಬಂಧನವಾಗಿದೆ. ಬಂಧಿತ ಮಿಶ್ರಾ ವಿರುದ್ಧ 171, 465, 468 ಮತ್ತು 471 ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಕೆಸಿ ಪೊಲೀಸರು, ಭಾರತೀಯ ಸೇನೆ, ಇಂಟಲಿಜೆನ್ಸ್ ಬ್ಯೂರೋ ಹಾಗೂ ಪ್ರಧಾನ ಮಂತ್ರಗಳ ಭದ್ರತಾ ಕಚೇರಿಯ ವಿವಿಧ ಏಜೆನ್ಸಿಗಳು ರಾಮೇಶ್ವರ್ ಮಿಶ್ರಾನನ್ನು ವಿಚಾರಣೆಗೆ ಒಳಪಡಿಸಿವೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜ.24ರ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 8 =
Remember me
