ನವದೆಹಲಿ:ರಾಜಕೀಯದಲ್ಲಿ ಮೆರೆಯಬೇಕು ಎನ್ನುವುದು ಅನೇಕರ ಕನಸ್ಸಾಗಿರುತ್ತದೆ. ಅದಕ್ಕೆ ಜನಬೆಂಬಲ ಬೇಕು, ಜನಬೆಂಬಲ ಬೇಕೆಂದರೆ ಒಂದಿಷ್ಟು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ದೃಷ್ಟಿಯಲ್ಲಿ ಕಳ್ಳನೊಬ್ಬ ಕದ್ದ ಹಣವನ್ನೇ ದಾನ ಮಾಡಿ, ಉಚಿತ ಶಿಬಿರಗಳನ್ನು ನಡೆಸಿ ರಾಜಕಾರಣಿಯಾಗಲು ಹೊರಟಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಸಿಮೆಂಟ್ ಕಾರ್ಪೋರೇಷನ್​ನಲ್ಲಿ ಅಪ್ರೆಂಟೀಸ್‍ಗಳ ನೇಮಕ – 100 ಹುದ್ದೆಗಳಿಗೆ ಅರ್ಜಿ ಆಹ್ವಾನ
ದೆಹಲಿ ವಾಸಿ ಮೊಹಮ್ಮದ್​ ಇರ್ಫಾನ್​ ರಾಜಕೀಯದ ಕನಸು ಕಂಡ ವ್ಯಕ್ತಿ. ಈತ ಬಿಹಾರ ಮೂಲದವನಾಗಿದ್ದು, ಅಲ್ಲಿನ ಜಿಲ್ಲಾ ಪರಿಷತ್​ ಚುನಾವಣೆಗೆ ನಿಲ್ಲಬೇಕೆಂದುಕೊಂಡಿದ್ದನಂತೆ. ಇದಕ್ಕೆಂದು ಆತ ಹಲವು ವರ್ಷಗಳ ಹಿಂದೆಯೇ ಕಳ್ಳತನ ಆರಂಭಿಸಿದ್ದಾನೆ. ದೆಹಲಿ, ಪಂಜಾಬ್​ ಮತ್ತು ಹಲವೆಡೆ ಕಳ್ಳತನ ಮಾಡಿ, ಅದಕ್ಕೆಂದೇ ಒಂದು ಗ್ಯಾಂಗ್​ ಅನ್ನೂ ಕಟ್ಟಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಾಗಿಲು ಒಡೆದು ಒಳಗೆ ಹೋಗಿ ಹಣ ಮತ್ತು ಚಿನ್ನಾಭರಣವನ್ನು ಕದ್ದು ಬರುತ್ತಿದ್ದನಂತೆ.
ಹೀಗೆ ಕದ್ದ ಹಣದಲ್ಲಿ ಹೀರೋ ಆಗುವ ಪ್ರಯತ್ನವನ್ನೂ ಆತ ಮಾಡಿದ್ದಾನೆ. ಉಚಿತ ಆರೋಗ್ಯ ಶಿಬಿರಗಳು, ಕಷ್ಟದಲ್ಲಿರುವವರಿಗೆ ದಾನ ಮಾಡಿ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದಾನೆ. ಅದೇ ಹಣದಲ್ಲಿ ಒಂದು ಜಾಗ್ವಾರ್​ ಮತ್ತು ಎರಡು ನಿಸ್ಸಾನ್​ ಕಾರುಗಳನ್ನು ಖರೀದಿಸಿಕೊಂಡು ಕಾರುಬಾರು ನಡೆಸಿದ್ದಾನೆ.
ಇದನ್ನೂ ಓದಿ:ತಗ್ಗಿಗೆ ಉರುಳಿದ ಸಿಮೆಂಟ್ ಲಾರಿ, ಅದೃಷ್ಟವಶಾತ್ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು
ಈ ರೀತಿ ನಡೆಯುತ್ತಿದ್ದ ಕಳ್ಳತನದಲ್ಲಿ ಇರ್ಫಾನ್​ ಕೈವಾಡವಿರುವುದರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈತನನ್ನು ಜನವರಿ 7ರಂದು ಬಂಧಿಸಿದ್ದಾರೆ. ನಂತರ ಆತ ನಿಜವನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಪಂಜಾಬ್​ನಲ್ಲಿ ಸಾಥ್​ ನೀಡುತ್ತಿದ್ದ ಇನ್ನಿಬ್ಬರು ಕಳ್ಳರನ್ನೂ ಬಂಧಿಸಲಾಗಿದೆ. ಅವರ ಬಳಿ ಇದ್ದ ಎರಡು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
