ಹೈದರಾಬಾದ್​​/ಮುಂಬೈ:ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮ ಅವರ ಒಂದು ವರ್ಷವೂ ತುಂಬಿಲ್ಲದ ಹೆಣ್ಣು ಮಗುವಿಗೆ ಟ್ವಿಟರ್​ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಸೈಬರ್​ ಸೆಲ್​​ ಪೊಲೀಸರ ಕಾರ್ಯಾಚರಣೆಯಲ್ಲಿ 23 ವರ್ಷ ವಯಸ್ಸಿನ ರಾಮ್​ನಾಗೇಶ್​ ಶ್ರೀನಿವಾಸನ್​​​ ಅಕುಬತಿನಿ ಎಂಬಾತ ಈ ವಿಕೃತ ಬೆದರಿಕೆ ಹಾಕಿದ್ದ ಎಂಬುದು ಬೆಳಕಿಗೆ ಬಂದಿದೆ.
ಕ್ರಿಕೆಟ್​ ಟಿ20 ವರ್ಲ್ಡ್​ ಕಪ್​ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಸೋತಾಗ ದೇಶದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ಹೊರಹಾಕಿದ್ದರು. ಕೆಲವರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ತಂಡದ ಆಟಗಾರರ ಮೇಲೆ ವೈಯಕ್ತಿಕ ವಾಗ್ದಾಳಿಯನ್ನೂ ನಡೆಸಿದರು. ಇದೇ ಸಂದರ್ಭದಲ್ಲಿ ಟ್ವಿಟರ್​ನಲ್ಲಿ ವಿರಾಟ್​ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಒಂದು ವಿಕೃತ ಬೆದರಿಕೆ ಬಂದಿತ್ತು.
ಇದನ್ನೂ ಓದಿ:ಸಂಭಾವನೆ ಪಡೆಯದೇ ಅಪ್ಪು ಅನೇಕ ಕೆಲಸ ಮಾಡ್ತಿದ್ರು.. ಪುನೀತ್​ರ ಆ ಜಾಗಕ್ಕೆ ಶಿವಣ್ಣ ಆಗ್ತಾರಾ ರಾಯಭಾರಿ?
ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು. ಇಂಥ ಕೃತ್ಯವು ನಾಚಿಕೆಗೇಡು ಎಂದು ಶೀಘ್ರವೇ ಆರೋಪಿಯನ್ನು ಬಂಧಿಸಲು ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿತ್ತು.
ರಾಮ್​ನಾಗೇಶ್​ ಶ್ರೀನಿವಾಸನ್​ ಅಕುಬತಿನಿ ಎಂಬುವನನ್ನು ಟ್ರೇಸ್​ ಮಾಡಿರುವ ಮುಂಬೈ ಪೊಲೀಸರು, ಬುಧವಾರದಂದು ಅವನನ್ನು ಹೈದರಾಬಾದಿನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತನು ಬಿ.ಟೆಕ್​. ಪದವೀಧರನಾಗಿದ್ದು ಫುಡ್​ ಡೆಲಿವರಿ ಕಂಪೆನಿಯೊಂದರಲ್ಲಿ ಸಾಫ್ಟ್​ವೇರ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನನ್ನು ಮುಂಬೈಗೆ ಕರೆತಂದು ನ್ಯಾಯಾಲಯದಲ್ಲಿ ಪೊಲೀಸ್​​ ಕಸ್ಟಡಿ ಪಡೆಯಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಪಾರ್ಕ್​ ಜಾಗದಲ್ಲಿ ಲೇಔಟ್​! 8 ಎಫ್​ಐಆರ್​ಗಳ ಆರೋಪಿಯ ಬಂಧನ

ಪೊಲೀಸರ ಭರ್ಜರಿ ಬೇಟೆ: ಕಳವಾಗಿದ್ದ 24 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
