ಪುಣೆ:ಪತ್ನಿಯೊಂದಿಗೆ ಜಗಳವಾಡಿದ ಕೋಪದಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಅನೇಕ ಗಂಟೆಗಳವರೆಗಿನ ಶೋಧ ಕಾರ್ಯಾಚರಣೆ ನಂತರವೂ ಆ ವ್ಯಕ್ತಿಯ ಗುರುತು ಸಿಗದಿದ್ದಾಗ ಕೊನೆಗೆ ಪವಾಡಸದೃಶ ರೀತಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಪಿಂಪಿರಿ-ಚಿಂಚ್​ವಾಡ ಮೂಲದ ಅಬಾಸಾಹೇಬ ಕೇಶವ ಪವಾರ್ ಎಂಬುವರು ಶನಿವಾರ (ಸೆ.08) ಬೆಳಗ್ಗೆ 11 ಗಂಟೆಗೆ ವಾಲ್ಹೇಕರವಾಡಿ ಪ್ರದೇಶದ ಜಾದವ್ ಘಾಟ್‌ನಲ್ಲಿ ಪಾವನಾ ನದಿಗೆ ಹಾರಿದರು. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಚಿಂಚ್​ವಾಡದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದರು.
ಕುಡಿತದ ಚಟ ಹೊಂದಿದ್ದ ಪವಾರ್, ತನ್ನ ಪತ್ನಿಯೊಂದಿಗೆ ಜಗಳವಾಡಿ ನದಿಗೆ ಹಾರಿದ್ದ. ಆತನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದರು. ನದಿ ದಡದಲ್ಲಿ ಗಿಡವೊಂದಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡಿದ್ದರಿಂದ ಅಲ್ಲಿನ ಮರ, ಪೊದೆಗಳಲ್ಲಿಯು ಹುಡುಕಾಡಿದರು. ಆದರೆ, ಆತನ ಕುರುಹು ಮಾತ್ರ ಸಿಗಲಿಲ್ಲ.
ಪವಾರ್ ತನ್ನ ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ನದಿಗೆ ಹಾರಿದ್ದ. ಪಾವನಾ ಅಣೆಕಟ್ಟಿನಿಂದ 4000 ಕ್ಯೂಸೆಕ್ ನೀರನ್ನು ಬಿಟ್ಟಿದ್ದರಿಂದ ನದಿಯಲ್ಲಿ ಹೆಚ್ಚಿನ ಹರಿವು ಇತ್ತು. ನದಿಗೆ ಹಾರಿದ ಪವಾರ್, ಉತ್ತಮ ಈಜುಪಟು ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾದರೂ ಇರಬಹುದೆಂದು ಭಾವಿಸಿದ್ದರು. ಬಹಳ ಹೊತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದರೂ ಆತನ ಯಾವುದೇ ಕುರುಹು ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು.
ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರು ಕರೆ ಮಾಡಿ ನದಿಯ ದಡದಲ್ಲಿ ಓರ್ವ ವ್ಯಕ್ತಿ ಪತ್ತೆಯಾಗಿರುವುದಾಗಿ ಮತ್ತು ಆತನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದರು ಎಂದು ಅಗ್ನಿಶಾಮಕ ಅಧಿಕಾರಿ ಗೌತಮ್ ಇಂಗವಾಲೆ ತಿಳಿಸಿದರು.
ನದಿಯ ಪ್ರವಾಹದ ನಡುವೆ ಕೊಂಬೆಯೊಂದನ್ನು ಹಿಡಿದು ನೇತಾಡುತ್ತಿದ್ದೆ ಎಂದು ಪವಾರ್​ ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ. ಆತ ನೀರಿನಲ್ಲಿ ಇಷ್ಟು ಹೊತ್ತು ಇದ್ದಿದ್ದನ್ನು ನಮ್ಮಿಂದಲೂ ಸಹ ನಂಬಲು ಸಾಧ್ಯವಿಲ್ಲ. ನೀರಿನಿಂದ ಹೊರಗೆ ಬಂದಾಗ ಆತ ನಡುಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಗಂಡ ಮರಳಿ ಬಂದಿದ್ದರಿಂದ ಪತ್ನಿ ಖುಷಿಯಾಗಿದ್ದು, ಇಬ್ಬರ ಮುನಿಸು ಸಹ ಶಮನವಾಗಿದೆ.(ಏಜೆನ್ಸೀಸ್​)
ನಿಮ್ಮ ಅಂಗೈನಲ್ಲಿ X ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನೀವು ಬೆರಗಾಗೋದು ಖಚಿತ!

ಔಷಧ ಚೀಟಿ ನೋಡಿ ಮೆಡಿಕಲ್​​ ಸಿಬ್ಬಂದಿ ಶಾಕ್​! ಪ್ರಿಸ್ಕ್ರಿಪ್ಷನ್ ಬರೆದ ಡಾಕ್ಟರ್​ಗೆ ಎದುರಾಯ್ತು ಸಂಕಷ್ಟ

ಪವಿತ್ರಾ ಬಳಿ ರೇಣುಕಾಸ್ವಾಮಿ ಇಷ್ಟೆಲ್ಲ ಕೇಳಿದ್ನಾ? ಚಾರ್ಜ್​ಶೀಟ್​ನಲ್ಲಿರುವ ಸಂಪೂರ್ಣ ಇನ್​ಸ್ಟಾ ಚಾಟಿಂಗ್​ ಹೀಗಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 3 =
Remember me
