ಆಗ್ರಾ :ಉತ್ತರಪ್ರದೇಶದ ಆಗ್ರಾದಲ್ಲಿ 23 ವರ್ಷದ ವ್ಯಕ್ತಿಯನ್ನು ಹಣಕ್ಕಾಗಿ ಕಿಡ್ನಾಪ್​ ಮಾಡಿ, ನಂತರ ಕೊಲೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ಮೃತನ ಶರೀರವನ್ನು ಪಿಪಿಇ ಸೂಟ್​ಗಳನ್ನು ತೊಟ್ಟು ಕೋವಿಡ್ ರೋಗಿ ಎಂಬಂತೆ ಹೂತುಹಾಕಿದ್ದರು ಎನ್ನಲಾಗಿದೆ. ಈ ಸಂಚಿಗೆ ಸೂತ್ರಧಾರಿಯಾಗಿದ್ದ ಮೃತನ ಗೆಳೆಯನೂ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗ್ರಾದಲ್ಲಿನ ಕೋಲ್ಡ್​ ಸ್ಟೋರೇಜ್​ ಮಾಲೀಕರ ಮಗನಾಗಿದ್ದ ಸಚಿನ್ ಚೌಹಾನ್​ ಎಂಬುವನು ಮೃತ ದುರ್ದೈವಿ. ಜೂನ್ 21 ರಂದು ಸಚಿನ್​ನನ್ನು ಆಗ್ರಾದ ಜನಸಂಚಾರವಿಲ್ಲದ ವಾಟರ್​ ಪ್ಲ್ಯಾಂಟ್​ಗೆ ಕರೆಸಿ ಅವನೊಂದಿಗೆ ಮದ್ಯ ಸೇವಿಸಿದ ಆರೋಪಿಗಳು, ನಂತರ ಆತನನ್ನು ಲ್ಯಾಮಿನೇಷನ್ ಪೇಪರ್​ ಬಳಸಿ ಉಸಿರುಗಟ್ಟಿಸಿ ಸಾಯಿಸಿದರು. ಕರೊನಾ ಸಮಯದಲ್ಲಿ ಪಿಪಿಇ ಕಿಟ್​ ಹಾಕಿಕೊಂಡು ಅಂತ್ಯಸಂಸ್ಕಾರ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಬೆಡ್​ಶೀಟ್​ ಸುತ್ತಿ, ಆಟೋದಲ್ಲಿ ಹೆಣ ಸಾಗಿಸುತ್ತಿದ್ದ ಯುವಕರು!
2 ಕೋಟಿ ರೂ.ಗಳ ಬೇಡಿಕೆ ಇಡುವ ಯೋಜನೆ ಹೊಂದಿದ್ದು, 25 ದಿನಗಳ ಹಿಂದೆಯೇ ಈ ಅಪರಾಧಕ್ಕೆ ಸಂಚು ನಡೆದಿತ್ತು ಎನ್ನಲಾಗಿದೆ. ಜೂನ್ 22 ರಂದು ಸಚಿನ್​ನ ಫೋನನ್ನು ಯಾರೋ ಬೇರೆಯವರು ಎತ್ತಿದಾಗ ಅನುಮಾನಗೊಂಡ ಪಾಲಕರು ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್​ ಕೊಟ್ಟರು. ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಪ್ರೇಮಪಯಣ: ಅಕ್ರಮವಾಗಿ ಗಡಿ ದಾಟಿದ ಅಂತರದೇಶೀಯ ನವವಿವಾಹಿತರು!

ಮಾಧುರಿ, ರವೀನಾ ಒಂದೇ ವೇದಿಕೆಯಲ್ಲಿ! ಡ್ಯಾನ್ಸ್​​ ನಂಬರ್​ಗಳ ಎಕ್ಸ್​​ಚೇಂಜ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
