ಚೀನಾ: ಅಜ್ಜ ತನ್ನ ಸ್ವಂತ ಮೊಮ್ಮಗಳನ್ನು ಅಪಹರಿಸಿ ತನ್ನ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿನ ನಿವಾಸಿ 65 ವರ್ಷ ವಯಸ್ಸಿನ ಯುವಾನ್ ಎನ್ನುವ ವೃದ್ಧ ತನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಶಾಲೆಯಿಂದ ಅಪಹರಿಸಿದ್ದಾರೆ. ನಂತರ ಅಪಹರಣಕಾರನಂತೆ ವರ್ತಿಸುತ್ತಾ, ತಮ್ಮ ಸ್ವಂತ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಡುತ್ತಾ ಬ್ಲ್ಯಾಕ್​​ಮೇಲ್​​ ಮಾಡಿದ್ದಾರೆ. “ನೀವು ನನಗೆ ಇನ್ನು ಮೂರು ದಿನಗಳಲ್ಲಿ  60 ಲಕ್ಷ ರೂಪಾಯಿ ನೀಡದೆ ಹೋದರೆ ನಿಮ್ಮ ಮಗಳನ್ನು ನೀವು ಮತ್ತೆ ನೋಡುವುದಿಲ್ಲ.” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಪೊಲೀಸರು ವೃದ್ಧನನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಭಾರತೀಯ ರೈಲ್ವೆ: ರೈಲು ಬೋಗಿಗಳಲ್ಲಿ ಬರೆಯಲಾದ 5 ಅಂಕಿಗಳ ರಹಸ್ಯವೇನು ಗೊತ್ತಾ?
ವ್ಯಕ್ತಿ ಜೂಜಾಡಿ ಲಕ್ಷಾಂತರ ರೂ ಕಳೆದುಕೊಂಡಿದ್ದ, ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೊಮ್ಮಗಳನ್ನು ಅಪಹರಿಸಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.
ನಾನು ಈ ಸ್ಥಿತಿಗೆ ಬರಲು ಮಗಳೇ ಕಾರಣ, ಆಕೆಗೆ ನಾನು ಚೆನ್ನಾಗಿ ಬದುಕುವುದು ಇಷ್ಟವಿಲ್ಲ, ನನ್ನ ಸಾವನ್ನೇ ಬಯಸುತ್ತಿದ್ದಾಳೆ ಎಂದು ವೃದ್ಧ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಕಾಲುವೆಯಲ್ಲಿ ಈಜಲು ಹೋದ ಐವರು ಯುವತಿಯರು ನೀರು ಪಾಲು; ಮಂಡ್ಯದಲ್ಲಿ ದುರ್ಘಟನೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nine + 2 =
Remember me
