ಕೋಲ್ಕತ:ಕರೊನಾ ವೈರಸ್​ ಕ್ವಾರಂಟೈನ್​ ಶಿಬಿರ ಅಳವಡಿಸುವ ವಿಚಾರದಲ್ಲಿ ಉಂಟಾದ ಗಲಾಟೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್​ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕೋಲ್ಕತದಿಂದ 180 ಕಿ.ಮೀ ದೂರವಿರುವ ಬಿರ್ಭಮ್​ ಜಿಲ್ಲೆಗೆ ಸೇರಿದ ತಲಿಬಪುರ್​ ಗ್ರಾಮದಲ್ಲಿ ಕ್ವಾರಂಟೈನ್ ಕ್ಯಾಂಪ್​ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಶಾಲೆಗೆ ಹೊಂದಿಕೊಂಡ ಹಾಸ್ಟೆಲ್​ನಲ್ಲಿ ಕ್ಯಾಂಪ್ ಅಳವಡಿಸಲು ಗ್ರಾಮದ ಒಂದು ಗುಂಪಿನ ಮಂದಿ ವಿರೋಧಿಸಿದರು. ಆದರೆ, ಮತ್ತೊಂದು ಗುಂಪು ಅಧಿಕಾರಿಗಳಿಗೆ ಬೆಂಬಲ ನೀಡಿದರು.
ಈ ವೇಳೆ ಎರಡು ಗುಂಪಿನ ನಡುವೆ ಗಲಭೆ ಉಂಟಾಗಿದೆ. ಒಬ್ಬರಿಗೊಬ್ಬರು ಸ್ಪೋಟಕಗಳನ್ನು ಎಸೆದಾಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫುಲ್​ ಶೇಖ್​ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದರೆಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.(ಏಜೆನ್ಸೀಸ್​)
ಏರ್​ ಇಂಡಿಯಾ ಪೈಲಟ್​​ಗಳನ್ನು ಹೊಗಳಿದ ಪಾಕಿಸ್ತಾನ; ನಮಗೆ ನಿಮ್ಮ ಬಗ್ಗೆ ತುಂಬ ಹೆಮ್ಮೆ ಇದೆ, ಗುಡ್​ ಲಕ್​ ಎಂದು ಹಾರೈಸಿದ ಎಟಿಸಿ

ವಿದೇಶದಲ್ಲಿ ವ್ಯಾಸಂಗದ ಕನಸಿಗೆ ತಣ್ಣಿರೆರಚಿದ ಕರೊನಾ: ಪರೀಕ್ಷೆ ವಿಳಂಬ, ಪ್ರವೇಶ ಮರೀಚಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 16 =
Remember me
