ರಾಜಸ್ಥಾನ:ಎರಡು ಬೈಕ್​ ನಡುವೆ ಅಪಘಾತವಾಗಿದ್ದು, ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶುಕ್ರವಾರ (ಸೆ.29) ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಬಿಜೆಪಿ, ಜೆಡಿಎಸ್​ ನಾಯಕರು ಕಾಂಗ್ರೆಸ್ ಸೇರ್ತಿರೋದು ಯಾಕೆ?
ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಇಕ್ಬಾಲ್ (ಮೃತ ವ್ಯಕ್ತಿ) ಎಂಬ ಯುವಕನಿಗೆ ಗಾಯವಾಗಿದೆ. ರಸ್ತೆಯ ಪಕ್ಕದಲ್ಲಿ ಕುಳಿತು ವಿಶ್ರಾಂತಿಸುತ್ತಿದ್ದ ಯುವಕನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಹೊಡೆದ ಬೆನ್ನಲ್ಲೇ ಗೊಂಪೊಂದು ಆತನ ಮೇಲೆ ದಾಳಿ ಮಾಡಿದೆ.
#जयपुर: सुभाष चौक थाना इलाके में युवक की हत्या का मामला, बड़ी चौपड़ से रामगंज चौपड़ तक बंद किया गया रास्ता, बीच रास्ते हजारों की तादाद में स्थानीय लोग बैठे धरने पर, युवक की हत्या के मामले को लेकर जता रहे विरोध, मौके पर STF, ERT, QRT, RAC और पुलिस फोर्स मौजूद, रामगंज थाने पर…pic.twitter.com/GotDtTZXPM
— The Nagari News (@TheNagariMedia)September 30, 2023

ಘಟನೆಯಲ್ಲಿ ಆರೋಪಿಗಳು ಇಕ್ಬಾಲ್‌ನ ತಲೆಗೆ ರಾಡ್‌ನಿಂದ ಹೊಡೆದು ಹತ್ಯೆಗೊಳಿಸಿದ್ದಾರೆ ಎಂದು ಆತನ ಸಂಬಂಧಿಕರು ಹೇಳಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಡಲು ನಿರಾಕರಿಸಿದ ಕುಟುಂಬಸ್ಥರು, ಸಮುದಾಯದ ಜನರೊಡನೆ ನಗರದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಜೈಪುರ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ:ಕುವೈತ್​​ನಲ್ಲಿ ದುರಂತ ಸಾವಿಗೀಡಾಗಿದ್ದ ಭಾರತೀಯ ಕುಟುಂಬಕ್ಕೆ 1 ತಿಂಗಳ ಬಳಿಕ ಅಂತಿಮ ಸಂಸ್ಕಾರ
ಜೈಪುರ ಆಡಳಿತವು ಇಕ್ಬಾಲ್ ಕುಟುಂಬಕ್ಕೆ ಪರಿಹಾರವಾಗಿ 50 ಲಕ್ಷ ರೂ., ಉದ್ಯೋಗ ಮತ್ತು ಡೈರಿ ಬೂತ್ ಕೊಡುವುದಾಗಿ ಘೋಷಿಸಿದೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದ್ದು, ಪೊಲೀಸರು ಪ್ರಕರಣದಲ್ಲಿ ಆರು ಜನರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಕಾವೇರಿ ವಿಚಾರ: ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಲಿದ್ಯಾ?; ಈ ಬಗ್ಗೆ ವಾಟಾಳ್​ ನಾಗರಾಜ್​ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
