ಲಖನೌ:ಕೋಪದ ಕೈಗೆ ಬುದ್ಧಿ ಕೊಡಬಾರದು ಎನ್ನುತ್ತಾರೆ. ಜೀವನದಲ್ಲಿ ಎಂದಿಗೂ ಸರಿ ಮಾಡಲಾಗದ ಅನಾಹುತಗಳಿಗೆ ಕೋಪ ದಾರಿ ಮಾಡಿಕೊಡುತ್ತದೆ. ಅಂತಹ ಕೆಟ್ಟ ಕೋಪಕ್ಕೆ ಬುದ್ಧಿ ಕೊಟ್ಟ ಮೂವರು ಯುವಕರು ಓರ್ವ ಯುವಕನ ಜೀವನವನ್ನೇ ಮುಗಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಗ್ಯಾಂಗ್​ಸ್ಟರ್​ ಸಹೋದರಿಯೆಂದು ಚೀರಾಡಿಕೊಂಡು ಗುಂಡು ಹಾರಿಸಿದ ಬುರ್ಖಾಧಾರಿ ಮಹಿಳೆ
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಪ್ರದೇಶದ ಕುಮಾರ್​ (25) ಇತ್ತೀಚೆಗೆ ತನ್ನ ಸಾಕುನಾಯಿಯನ್ನು ವಾಕಿಂಗ್​​ ಕರೆದುಕೊಂಡು ಹೊರಟಿದ್ದ. ಖಾಲಿ ರಸ್ತೆಯಲ್ಲಿ ಆತ ಹೋಗುತ್ತಿದ್ದಾಗ ಮೂರು ಜನ ಯುವಕರ ಗುಂಪು ಆತನನ್ನು ಅಡ್ಡ ಹಾಕಿದೆ. ಆಗ ಕುಮಾರ್​ ಜತೆಗಿದ್ದ ನಾಯಿ ಜೋರಾಗಿ ಬೊಗಳಲಾರಂಭಿಸಿದೆ. ನಾಯಿ ಬೊಗಳಿದ್ದರಿಂದಾಗಿ ಸಿಟ್ಟಿಗೆದ್ದ ಯುವಕರ ಗುಂಪು ಕುಮಾರ್​ಗೆ ಚಾಕುವಿನಿಂದ ಚುಚ್ಚಿದೆ. ನೋವಿನಿಂದ ಕುಮಾರ್​ ಕೂಗಲಾರಂಭಿಸಿದಾಗ ಆತನ ಇಬ್ಬರು ಸಹೋದರರಾದ ಸೋನು ಮತ್ತು ಸುನಿಲ್​ ಮನೆಯಿಂದ ಓಡಿ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾದ ಹಿನ್ನೆಲೆಯಲ್ಲಿ ಅಲ್ಲಿಂತ ಓಡಿ ಹೋಗಿದ್ದಾರೆ.
ಇದನ್ನೂ ಓದಿ:ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ
ಮೂವರು ಸಹೋದರರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಕುಮಾರ್​ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಸದ್ಯ ಇಬ್ಬರು ಸಹೋದರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸ್​ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! ದಾರಿ ಮಧ್ಯೆ ಎದುರಾದ ಜವರಾಯ

ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fifteen =
Remember me
