ರಾಜಸ್ಥಾನ:ಶ್ರದ್ಧಾ ವಾಕರ್ ಕೊಲೆಯನ್ನು ನೆನಪಿಸುವಂಥ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತನ್ನ ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು, ಶವ ಪೀಸ್ ಪೀಸ್ ಮಾಡಿದ್ದು, ಬಳಿಕ ಒಂದೊಂದು ತುಂಡನ್ನೂ ಒಂದೊಂದು ಕಡೆಗೆ ಎಸೆದ ಪ್ರಕರಣ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಶರ್ಮಾ ಅಲಿಯಾಸ್ ಅಚಿತ್ಯಾ ಗೋವಿಂದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ರಾಜಸ್ಥಾನದ ಉತ್ತರ ವಿಭಾಗದ ಡಿಸಿಪಿ ಪರಿಷ್ ದೇಶ್​​ಮುಖ್ ಶನಿವಾರ ತಿಳಿಸಿದ್ದಾರೆ.
ಡಿ. 11ರ ಭಾನುವಾರ ಅನುಜ್​ ಹಾಗೂ ಸಂಬಂಧಿ ಯುವತಿ ಮನೆಯಲ್ಲಿ ಇಬ್ಬರೇ ಇದ್ದಿದ್ದು, ಅನುಜ್ ದೆಹಲಿಗೆ ಹೋಗೋಣ ಎಂದರೆ ಆಕೆ ನಿರಾಕರಿಸಿದ್ದಳು. ಆಗ ಮಾತಿಗೆ ಮಾತು ಬೆಳೆದು ಆಕೆಯನ್ನು ಕೊಲೆ ಮಾಡಿದ್ದ. ನಂತರ ಆಕೆ ಕಾಣಿಸುತ್ತಿಲ್ಲ ಎಂದು ಪೊಲೀಸರಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ.
ಅದಾಗ್ಯೂ ಪೊಲೀಸರು ಅನುಮಾನದ ಮೇಲೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನೇ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಬೆಳಕಿಗೆ ಬಂದಿತ್ತು. ನಂತರ ಶವವನ್ನು ಮಾರ್ಬಲ್ ಕಟರ್ ಮತ್ತು ಚಾಕುವಿನಿಂದ ಸುಮಾರು ಹತ್ತು ಪೀಸ್ ಮಾಡಿದ್ದ. ನಂತರ ಒಂದೊಂದು ತುಂಡನ್ನು ದೆಹಲಿಯ ಒಂದೊಂದು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಗಿ ಹೇಳಿದ್ದ. ಬಹುತೇಕ ತುಂಡುಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

ರೈಲಲ್ಲಿ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ; ತಿಂಡಿಗೆ ಆಮ್ಲೆಟ್​ ತಿಂದಿದ್ದ ಇನ್ನೊಬ್ಬ ಪ್ರಯಾಣಿಕನಿಗೂ ಪಶ್ಚಾತ್ತಾಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
