ಲಖನೌ :ಕಸಾಯಿಯೊಬ್ಬ ತನ್ನ ಅಣ್ಣ ಅತ್ತಿಗೆಯನ್ನು ಕೊಚ್ಚಿ ಕೊಂದಿದ್ದಲ್ಲದೆ, ಅವರ ಒಂದು ವರ್ಷದ ಮಗುವಿನ ಕೈಕಾಲು ಕತ್ತರಿಸಿರುವ ಭೀಕರ ಘಟನೆ ಉತ್ತರಪ್ರದೇಶದ ಭಡೋಹಿ ಜಿಲ್ಲೆಯಿಂದ ವರದಿಯಾಗಿದೆ. ಭಡೋಹಿಯ ಕಜಿಯಾನ ಪ್ರದೇಶದ ನಿವಾಸಿಯಾದ ನೌಶಾದ್ ಎಂಬುವ ​ಮನೆಯಲ್ಲಾದ ಜಗಳದ ಸಮಯದಲ್ಲಿ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ವೃತ್ತಿಯಿಂದ ಕಸಾಯಿಯಾಗಿರುವ ನೌಶಾದ್, ನಿನ್ನೆ ಸಂಜೆ ಮನೆಯಲ್ಲಿ ಜಗಳ ನಡೆದ ಹಿನ್ನೆಲೆಯಲ್ಲಿ ತನ್ನ ಅಣ್ಣ ಜಮೀಲ್ (42 ವರ್ಷ) ಮತ್ತು ಅತ್ತಿಗೆ ರೂಬಿ(38 ವರ್ಷ) ಮೇಲೆ ತನ್ನ ಮಾಂಸ ಕತ್ತರಿಸುವ ಚೂಪಾದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ದಂಪತಿಯ ಒಂದು ವರ್ಷದ ಮಗುವಿನ ಒಂದು ಕೈ ಮತ್ತು ಕಾಲನ್ನು ಕತ್ತರಿಸಿದ್ದಾನೆ. ನಂತರ ಮೂವರನ್ನೂ ರಕ್ತದ ಮಡುವಿನಲ್ಲಿ ಬಿಟ್ಟು ತನ್ನ ತಾಯಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಭಡೋಹಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಹಾಡುಹಗಲೇ ಯುವಕನ ಬರ್ಬರ ಹತ್ಯೆ; ಬೆಚ್ಚಿ ಬೀಳಿಸುತ್ತೆ ಈ ಘಟನೆ
ಜಮೀಲ್ ಮತ್ತು ರೂಬಿ ಇಬ್ಬರೂ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೆ ಮೃತಪಟ್ಟಿದ್ದರೆ, ಹಲ್ಲೆಗೊಳಗಾದ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಭಡೋಹಿ ಪೊಲೀಸರು ಆರೋಪಿ ನೌಶಾದ್​ನ ಪತ್ತೆ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ ಕಾಲದಲ್ಲಿ ಮನೆಗಳಲ್ಲೇ ಗಟ್ಟಿಮೇಳ ! ತುಮಕೂರು ಜಿಲ್ಲೆಯಲ್ಲಿ 2 ದಿನಗಳಲ್ಲಿ 500 ಮದುವೆ !

ಮಡಿಕೇರಿ ಕೋವಿಡ್​ ಆಸ್ಪತ್ರೆಯಲ್ಲಿ ಎಡವಟ್ಟು ! ಮೃತ ಮಹಿಳೆ ಮಾಂಗಲ್ಯ ಸರ ಕಾಣೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
