ಮುಂಬೈ:ಮಕ್ಕಳು ಬಿಸ್ಕತ್ತು, ಚಾಕಲೇಟಿಗಾಗಿ ಪಾಲಕರನ್ನು ಪೀಡಿಸುವುದು ಬಹಳ ಸಹಜ. ಸ್ವಲ್ಪ ಕಿರಿಕಿರಿಯಾದರೂ ಅಪ್ಪ-ಅಮ್ಮ ಆದವರು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಆದರೆ ಮಹಾರಾಷ್ಟ್ರದ ಹೆಣ್ಣು ಮಗುವೊಂದು ಐದು ರೂಪಾಯಿಯ ಸಿಹಿತಿಂಡಿಗಾಗಿ ಆಸೆ ಪಟ್ಟಿದ್ದಕ್ಕೆ ತಂದೆಯ ಕೋಪಕ್ಕೊಳಗಾಗಿ, ಸಾವಿನ ಕದ ತಟ್ಟಬೇಕಾದ ದಾರುಣ ಘಟನೆಯೊಂದು ನಡೆದಿದೆ.
ತಂದೆಯೇ ಮಗುವಿನ ತಲೆ ಒಡೆದು ಸಾಯಿಸಿರುವ ಈ ವಿಕೃತ ಘಟನೆಯು ಮಹಾರಾಷ್ಟ್ರದ ಗೊಂಡಿಯ ಜಿಲ್ಲೆಯಿಂದ ವರದಿಯಾಗಿದೆ. ಮುಂಬೈನಿಂದ 900 ಕಿಲೋಮೀಟರ್ ದೂರದಲ್ಲಿರುವ ಲೊನಾರಾ ಎಂಬ ಗ್ರಾಮದ ನಿವಾಸಿಯಾಗಿದ್ದ 20 ತಿಂಗಳ ವೈಷ್ಣವಿ, ಆ ನತದೃಷ್ಟ ಮಗು.
ಇದನ್ನೂ ಓದಿ:ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು … ಹೀಗೂ ಇರ್ತಾರಾ ?!
ಫೆಬ್ರವರಿ 2 ರಂದು 28 ವರ್ಷದ ವಿವೇಕ್ ಯೂಕೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬಂದಾಗ ಮಗಳು ವೈಷ್ಣವಿ ಅಳುತ್ತಿದ್ದಳು. ಗೋಧಿಹಿಟ್ಟಿನಿಂದ ಮಾಡುವ ಖಾಜ ಎಂಬ ಸಿಹಿತಿನಿಸಿಗಾಗಿ ಮಗು ಅಳುತ್ತಿದ್ದು, ಖರೀದಿಸುವುದಕ್ಕೆ 5 ರೂಪಾಯಿ ಕೊಡಬೇಕಾಗಿ ಹೆಂಡತಿ ವರ್ಷ ಕೇಳಿದಳು. ಚಿಲ್ಲರೆ ಇಲ್ಲ ಎಂದ ವಿವೇಕ್ ಸಿಟ್ಟಿನಿಂದ ಮಗುವನ್ನು ಎತ್ತಿಕೊಂಡು ಹೋಗಿ ಮಗುವಿನ ತಲೆಯನ್ನು ಬಾಗಿಲಿಗೆ ಮತ್ತು ಮೆಟ್ಟಿಲಿಗೆ ಮತ್ತೆ ಮತ್ತೆ ಕುಟ್ಟಿದ್ದಾನೆ. ಏಟಿನ ರಭಸಕ್ಕೆ ಮಗು ಸ್ಥಳದಲ್ಲೇ ಸಾವಪ್ಪಿದೆ.
“ದುಡ್ಡು ಕೇಳಿದ್ದಕ್ಕೆ ಕೋಪ ಮಾಡಿಕೊಂಡು, ಮಗುವನ್ನು ಬಾಗಿಲ ಬಳಿ ತೆಗೆದುಕೊಂಡು ಹೋಗಿ ತಲೆಯನ್ನು ಕುಟ್ಟಲಾರಂಭಿಸಿದ. ತಡೆಯಲು ಹೋದ ನನಗೂ ಹೊಡೆದ. ಹೇಗೋ ಮಾಡಿ ಮಗಳನ್ನು ತಿರೋಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ವೈದ್ಯರು ಮಗು ಸತ್ತುಹೋಗಿದೆ ಎಂದು ಹೇಳಿದರು” ಎಂದು ತಾಯಿ ವರ್ಷ ಪೊಲೀಸರಿಗೆ ದೂರು ನೀಡಿದ್ದಾಳೆ. ತಿರೋಡಾ ಪೊಲೀಸರು ಕೊಲೆಯ ಪ್ರಕರಣ ದಾಖಲಿಸಿ, ವಿವೇಕ್​ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕಾಡಾನೆ ದಾಳಿಯಿಂದ ಬೆಳೆ ಹಾನಿ, ಪ್ರತಿ ವರ್ಷವೂ ತಪ್ಪದ ಗೋಳು
ವಿವೇಕನಿಗೆ ಹೆಂಡತಿಯನ್ನು ಹೊಡೆಯುವುದು ಹೊಸ ವಿಷಯವಾಗಿರಲಿಲ್ಲ. 2018 ರಲ್ಲಿ ವಿವಾಹವಾಗಿದ್ದ ಆತ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಆ ಕಾರಣಕ್ಕಾಗಿ ವರ್ಷ ಸ್ವಲ್ಪ ಕಾಲ ಅವನನ್ನು ಬಿಟ್ಟು ತವರಿಗೆ ಹೋಗಿದ್ದಳು. ಮತ್ತೆ 2019 ರಲ್ಲಿ ವಾಪಸ್ ಬಂದು ಹೇಗೋ ಸಂಸಾರ ನಡೆಸುತ್ತಿದ್ದಳು ಎಂದು ಠಾಣಾಧಿಕಾರಿ ಯೋಗೇಶ್ ಪರ್ಧಿ ತಿಳಿಸಿದ್ದಾರೆ.(ಏಜೆನ್ಸೀಸ್)
8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?
ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
