ಇಂದೋರ್​:ಆಘಾತಕಾರಿ ಘಟನೆ ಒಂದರಲ್ಲಿ 2 ಸಾವಿರ ರೂ. ಹಣ ಖರ್ಚಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.
ಮೃತರನ್ನು ಬಾಬು ಚೌಧರಿ(50) ಎಂದು ಗುರುತಿಸಲಾಗಿದ್ದು, ಆತನ ಪುತ್ರ ಸೋಹನ್​ ಚೌಧರಿ(25)ಯನ್ನು ಪೊಲೀಸರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.
ಇದನ್ನೂ ಓದಿ:VIDEO| ತಾಳಿಕಟ್ಟುವ ಮುನ್ನ ವಧುವನ್ನು ಎಳೆದೊಯ್ದ ಪೊಲೀಸರು
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತಿಕಾ ವಸಲ್ ವೃತ್ತಿಯಲ್ಲಿ ರೈತರಾಗಿರುವ ಬಾಬು ಚೌಧರಿ ಇಂದೋರ್​ಮ ದೇಪಾಲ್​ಪುರ ಎಂಬ ಪ್ರದೇಶದಲ್ಲಿ ವಾಸವಿದ್ದರು. ಅವರ ಪುತ್ರ ಸೋಹನ್​ ಮಾದಕವ್ಯಸನಿಯಾಗಿದ್ದು, ತಂದೆಯ ಬಳಿ ಖರ್ಚಿಗೆಂದು 2 ಸಾವಿರ ರೂ. ಹಣ ಕೇಳಿದ್ದಾನೆ.
ಹಣ ಕೊಡಲು ನಿರಾಕರಿಸಿದ್ದರಿಂದ ಕುಪಿತಗೊಂಡ ಸೋಹನ್​ ಕಲ್ಲಿನಿಂದ ತನ್ನ ತಂದೆಯ ತಲೆಯನ್ನು ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯೂ ಸಂಬಂಧಿಕರೊಬ್ಬರ ಜಮೀನಿನಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತಿಕಾ ವಸಲ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
