ಕರೀಂನಗರ:ಸಾರ್ವಜನಿಕ ಉದ್ದಿಮೆಯಲ್ಲಿ ಕೆಲಸ ಮಾಡುವ ಬಯಕೆ ಯಾರಿಗಾದರೂ ಇರುತ್ತದೆ. ಇದಕ್ಕಾಗಿ ಅವರೆಲ್ಲರೂ ಸಾಧ್ಯವಾದಷ್ಟು ನ್ಯಾಯಯುತ ಮಾರ್ಗದಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲವೇ ಯಾರಿಗಾದರೂ ಲಂಚ ಕೊಟ್ಟಾದರೂ ತಮ್ಮ ಆಸೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ, ಇಲ್ಲೊಬ್ಬ ವ್ಯಕ್ತಿ ಅನುಕಂಪದ ಆಧಾರದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು 55 ವರ್ಷದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಈತನ ಈ ಕೃತ್ಯಕ್ಕೆ ಆತನ ತಾಯಿ ಮತ್ತು ತಮ್ಮ ಸಹಕರಿಸಿದ್ದಾರೆ ಎಂಬುದು ಮತ್ತೂ ಆಘಾತಕಾರಿ ಅಂಶ.
ತೆಲಂಗಾಣದ ಪೆದ್ದಾಪಲ್ಲಿ ಜಿಲ್ಲೆಯ ಕೊತ್ತೂರು ಗ್ರಾಮದ ಬಳಿಯ ಗೋದಾವಾರಿಖಾನಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಸಾರ್ವಜನಿಕ ಉದ್ದಿಮೆ ಸಿಂಗರೇನಿ ಕೊಲೇರೀಸ್​ ಕಂಪನಿ ಲಿಮಿಟೆಡ್​ನ ಉದ್ಯೋಗಿ ಮೃತಪಟ್ಟವರು. ಈ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಲುವಾಗಿ ಡಿಪ್ಲೊಮಾ ಪದವೀಧರ 25 ವರ್ಷದ ಪುತ್ರ ತಂದೆಯನ್ನು ಹತ್ಯೆ ಮಾಡಿದವನು. ಇದೀಗ ಈ ಯುವಕ ಹಾಗೂ ಈತನ ತಮ್ಮನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ತಾಯಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ರಾಮಗುಂಡಂ ಪೊಲೀಸ್​ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೊರಟಿದ್ದ ಇಬ್ಬರು ತೆಪ್ಪ ಮಗುಚಿ ನೀರು ಪಾಲು
ಶನಿವಾರ ರಾತ್ರಿ ತಂದೆ ಗಾಢ ನಿದ್ದೆಯಲ್ಲಿದ್ದಾಗ ಯುವಕ ಟವೆಲ್​ನಿಂದ ಕತ್ತನ್ನು ಬಿಗಿದು ತಂದೆಯನ್ನು ಹತ್ಯೆ ಮಾಡಿದ್ದ. ಈತನ ಈ ಕೃತ್ಯಕ್ಕೆ ಆತನ ಸಹೋದರ ಹಾಗೂ ತಾಯಿ ಕೂಡ ಸಹಕರಿಸಿದ್ದರು. ಮರುದಿನ ಬೆಳಗ್ಗೆ ಹೃದಯಾಘಾತದಿಂದ ಸತ್ತಿರುವುದಾಗಿ ಹೇಳಿ ತಂದೆಯ ಅಂತ್ಯಕ್ರಿಯೆ ನೆರವೇರಿಸಲು ಸಹೋದರರಿಬ್ಬರೂ ತರಾತುರಿ ತೋರಿದ್ದರು. ಆದರೆ, ಅನುಮಾನಗೊಂಡ ನೆರೆಹೊರೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸುವಂತೆ ಒತ್ತಡ ಹೇರಿದ ನಂತರದಲ್ಲಿ ಸಹೋದರರಿಬ್ಬರ ಕಪಟ ಬಯಲಾಗಿದ್ದಾಗಿ ತಿಳಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಸಿಬ್ಬಂದಿ ಶವವನ್ನು ಪರಿಶೀಲಿಸಿದಾಗ ಕತ್ತಿನ ಸುತ್ತ ಕಪ್ಪು ಕಲೆ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಅವರು, ಶವವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಉಸಿರುಗಟ್ಟಿಸಿ ಕೊಂದಿರುವುದು ಗೊತ್ತಾಯಿತು ಎಂದು ಹೇಳಿದ್ದಾರೆ.
‘ಅಪ್ಪ’ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
