ತಿರುವನಂತಪುರಂ:ಯುವತಿ ಪ್ರೀತಿಗೆ ಒಪ್ಪಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಯುವಕನೋರ್ವ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇಳದ ಮಲಪ್ಪುರಂನ ಎಲನಾಡ್​ನಲ್ಲಿ ನಡೆದಿದೆ. ಯುವತಿಯ ತಂದೆಯ ಅಂಗಡಿಗೂ ಬೆಂಕಿ ಬಿದ್ದಿದ್ದು ಅದರಲ್ಲೂ ಅನುಮಾನಗಳು ಆರಂಭವಾಗಿವೆ.
21 ವರ್ಷದ ದೃಶ್ಯಾ ಕೊಲೆಯಾದ ಯುವತಿ. ದೃಶ್ಯಾಳನ್ನು ವಿನೇಶ್​ ವಿನೋದ್​ (21) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಪ್ರೀತಿಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಸಿಟ್ಟಾಗಿದ್ದ ವಿನೇಶ್​ ಗುರುವಾರ ಬೆಳಗ್ಗೆ 8.30ರ ಸಮಯಕ್ಕೆ ಯುವತಿಯ ಮನೆಗೆ ನುಗ್ಗಿದ್ದಾನೆ. ಆಕೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಅದನ್ನು ತಡೆಯಲು ಯುವತಿಯ ಸಹೋದರಿ ಬಂದಿದ್ದು ಆಕೆಯ ಮೇಲೂ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ.
ಚಾಕು ಇರಿತದಿಂದಾಗಿ ದೃರ್ಶಯ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಆಕೆಯ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರಂದು ಯುವತಿಯ ತಂದೆಯ ಅಂಗಡಿಗೆ ಬೆಂಕಿ ಬಿದ್ದಿದೆ. ಅದರ ಹಿಂದೆಯೂ ವಿನೇಶ್​ನ ಕೈವಾಡವಿರಬಹುದು ಎನ್ನಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಎಸ್​​ಐನಿಂದ ಡೈರೆಕ್ಟರ್​ವರೆಗೆ.. ಲೈಂಗಿಕ ಕಿರುಕುಳ ನೀಡಿದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ ನಟಿ!

ಕುದಿಯುವ ನೀರಿಗೆ 3ಕೆಜಿ ಸಕ್ಕರೆ ಹಾಕಿ ಗಂಡನ ಮೈ ಮೇಲೆ ಸುರಿದ ಹೆಂಡತಿ! ಇಷ್ಟಕ್ಕೆಲ್ಲ ಕಾರಣ ಅದೊಂದೇ ಕಾಲ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + 7 =
Remember me
