ಜಾರ್ಖಂಡ್​:ಜಾರ್ಖಂಡ್‌ ರಾಜ್ಯದ ಬೊಕಾರೊ ಎಂಬಲ್ಲಿ ಈ ಕಿರಾತಕನಿಗೆ ಆತನ 12ನೇ ಹೆಂಡತಿ ಹೆಚ್ಚು ಮದ್ಯಪಾನ ಮಾಡಬೇಡಿ ಎಂದಿದ್ದಾರೆ. ಅಷ್ಟಕ್ಕೇ ಸಿಟ್ಟಾದ ಈತ, ತನ್ನ ಹೆಂಡತಿಯನ್ನು ಥಳಿಸಿ ಕೊಂದಿದ್ದಾನೆ.
ಈ ಭಯಾನಕ ಘಟನೆ ಬೆಳಕಿಗೆ ಬಂದಿದ್ದು ಮೃತ ಮಹಿಳೆ ಆತನ 12ನೇ ಪತ್ನಿ ಎನ್ನಲಾಗಿದೆ. ಈ ಕಿರಾತಕನ ಹೆಸರು ರಾಮ್ ಚಂದ್ರ ತುರಿ ಎಂದು. ಈತ ಈಗಾಗಲೇ 11 ಬಾರಿ ಮದುವೆಯಾಗಿದ್ದ ಎನ್ನಲಾಗಿದೆ. ಈತ ಮದ್ಯಪಾನ ಕ್ಕೆ ದಾಸನಾಗಿದ್ದು ಅದರಿಂದಾಗಿ ಈ 11 ಜನ ಮಹಿಳೆಯರು ಈತನನ್ನು ತೊರೆದಿದ್ದರು. ತುರಿ ಅವರು ಕನಿಷ್ಠ 20 ವರ್ಷಗಳ ಹಿಂದೆ ಸಾವಿತ್ರಿ ದೇವಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಓರ್ವ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಇನ್ನುಳಿದ ಮೂವರು ಘಟನೆ ನಡೆದ ದಿನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು, ಪೋಷಕರನ್ನು ಒಂಟಿಯಾಗಿ ಬಿಟ್ಟು ಹೋಗಿದ್ದರು.
ಗ್ರಾಮಸ್ಥರ ಪ್ರಕಾರ, ರಾಮಚಂದ್ರ ತುರಿ ಕುಡಿದು ಮನೆಗೆ ಮರಳಿದ್ದ. ಮತ್ತೆ ಮನೆಯಲ್ಲಿ ಮದ್ಯಪಾನ ಆರಂಭಿಸಿದಾಗ ಪತ್ನಿ ಸಾವಿತ್ರಿದೇವಿ ಆತನ್ನು ತಡೆದಿದ್ದಾರೆ. ಈ ಸಂದರ್ಭ ಕೋಪದ ಭರದಲ್ಲಿ ರಾಮ್​ ಚಂದ್ರ ತುರಿ ತನ್ನ ಹೆಂಡತಿಯನ್ನು ಕೋಲಿನಿಂದ ಹೊಡೆಯಲು ಪ್ರಾರಂಭಿಸಿದನು. ಇದರಿಂದಾಗಿ ಪತ್ನಿ ಮೂರ್ಛೆ ಹೋಗಿದ್ದಾರೆ.
ಆದರೆ ಈ ಕಿರಾತಕ ಮಾತ್ರ ತನ್ನ ಪತ್ನಿ ಸಾಯುವವರೆಗೂ ಅವಳನ್ನು ಹೊಡೆಯುತ್ತಲೇ ಇದ್ದ ಎನ್ನಲಾಗಿದೆ. ಮಕ್ಕಳು ಮನೆಗೆ ಹಿಂತಿರುಗಿದಾಗ, ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಸಹಾಯಕ್ಕಾಗಿ ಕಿರುಚಿದರು. ಅಕ್ಕಪಕ್ಕದ ಮನೆಯವರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ ನಂತರ ರಾಮಚಂದ್ರ ತುರಿಯನ್ನು ಬಂಧಿಸಿದ್ದಾರೆ. ಸಾವಿತ್ರಿ ದೇವಿ ಆರೋಪಿಯ 12ನೇ ಪತ್ನಿ ಎಂದು ಪಂಚಾಯತ್ ಸದಸ್ಯರೊಬ್ಬರು ತಿಳಿಸಿದ್ದಾರೆ. ಆದರೆ ಪೊಲೀಸರು ಇದುವರೆಗೂ ಖಚಿತಪಡಿಸಿಲ್ಲ. ಮಹಿಳೆಯ ಪತಿ, ಅತ್ತೆ ಮತ್ತು ಸೊಸೆಯನ್ನು ಶನಿವಾರ ಆಕೆಯ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
