ಚಂಗನಾಸ್ಸೆರಿ:ಯುವಕನೊಬ್ಬ ಗಂಟಲು ಸೀಳಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಕೊಡಿಥನಂನಲ್ಲಿ ಶನಿವಾರ ರಾತ್ರಿ ನಡೆದಿದ್ದು, ಮೃತರನ್ನು ಕುಂಜನಮ್ಮ (55) ಎಂದು ಗುರುತಿಸಲಾಗಿದೆ.
ಪೊಲೀಸ್​ ಮೂಲಗಳ ಪ್ರಕಾರ ಶನಿವಾರ ರಾತ್ರಿ 10:30ರ ಸುಮಾರಿಗೆ ಘಟನೆ ನಡೆದಿದ್ದು, ಮೃತ ಕುಂಜನಮ್ಮ ಮಗ ಜಿತಿನ್​ ಬಾಬು (27) ಎಂಬಾತನನ್ನು ತ್ರಿಕೋಡಿಥನಂ ಪೊಲೀಸರು ಬಂಧಿಸಿ, ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:ಚಿಕಿತ್ಸೆ ನೀಡುತ್ತಾ ಕರೊನಾ ರೋಗಿಯ ಮೇಲೆ ಡಾಕ್ಟರ್​ಗೆ ಲವ್​ ಆಯ್ತಾ? ಹಿಂದಿನ ಅಸಲಿ ಕಹಾನಿ ಏನು?
ತಾಯಿ ಮತ್ತ ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿ ತಾಯಿಯ ಗಂಟಲು ಸೀಳಿ ಆರೋಪಿ ಮಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ತನ್ನ ನೆರೆಯವರಿಗೆ ದೂರವಾಣಿ ಕರೆ ಮಾಡಿ ತನ್ನ ಸತ್ತ ತಾಯಿಯ ಮೃತದೇಹ ನೋಡುವಂತೆ ಕರೆದಿದ್ದಾನೆ. ಅದಕ್ಕೂ ಮುನ್ನ ನೀವು ಇಲ್ಲಿಗೆ ಬಂದರೆ ಏನೋ ಒಂದನ್ನು ನೋಡುತ್ತೀರಾ ಎಂದು ಹೇಳಿದ್ದಾನೆ. ಬಂದು ನೋಡಿದವರು ಮೃತದೇಹ ಕಂಡು ಕಂಗಾಲಾಗಿ, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಬೆಡ್​ ರೂಮ್​ನಲ್ಲಿ ಗಂಟಲು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಕುಂಜನಮ್ಮ ಬಿದ್ದಿದ್ದನ್ನು ನೋಡುತ್ತಾರೆ. ಬಳಿಕ ಆಕೆಯ ಶವವನ್ನು ವಶಕ್ಕೆ ಪಡೆದುಕೊಂಡು, ಆರೋಪಿ ಮಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್​ ಮಾರ್ಕ್ಸ್​!
ಮತ್ತಷ್ಟು ಖಚಿತ ಪಡಿಸಿಕೊಳ್ಳಲು ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳ ಪರಿಶೀಲನೆ ನಡೆಸಿದೆ. ಶವವನ್ನು ಪರೀಕ್ಷೆಗಾಗಿ ಕೊಟ್ಟಯಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.(ಏಜೆನ್ಸೀಸ್​)
ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್​ನಲ್ಲಿ ಇಬ್ಬರ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 1 =
Remember me
