ನವದೆಹಲಿ:ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪುತ್ರನೊಬ್ಬ ಗುಂಡಿಟ್ಟು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ.ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ ಬಾಲಾ ದೇವಿ (60) ಹತಳಾದ ತಾಯಿ. ಸೂರಜ್​ (26) ಹತ್ಯೆ ಮಾಡಿದವನು. ಆತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್​ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಜ್​ ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ. ಬಾಲಾದೇವಿ ಇನ್ನೂ ಅಡುಗೆ ಮಾಡುತ್ತಿದ್ದಳು. ಮನೆಗೆ ಬರುತ್ತಲೇ ಊಟಕ್ಕೆ ಕೊಡುವಂತೆ ಸೂರಜ್​ ಒತ್ತಾಯಿಸಿದ್ದ. ಕಂಠಮಟ್ಟ ಕುಡಿದು ಬಂದಿದ್ದೀಯಾ. ಸ್ವಲ್ಪವಾದರೂ ನಶೆ ಇಳಿಯಲಿ. ಅಲ್ಲದೆ, ಇನ್ನೂ ಅಡುಗೆ ಆಗಬೇಕಿದೆ ಎಂದು ಬಾಲಾ ದೇವಿ ಹೇಳಿದ್ದಳು.
ಇದನ್ನೂ ಓದಿ:ಸಿನಿಮಾ ನಟಿ ಮೇಲೆ ಅತ್ಯಾಚಾರ
ಇದರಿಂದ ಕೆರಳಿದ ಸೂರಜ್​ ತನ್ನ ಬಳಿ ಇದ್ದ ಅಕ್ರಮ ಪಿಸ್ತೂಲು ಬಳಸಿ ತಾಯಿಯ ಮೇಲೆ ಗುಂಡು ಸಿಡಿಸಿದ. ಗುಂಡಿನ ಮೊರೆತ ಕೇಳಿದ ನೆರೆಹೊರೆಯವರು ತಕ್ಷಣವೇ ಬಾಲಾ ದೇವಿ ಅವರ ಮನೆಗೆ ಬಂದಿದ್ದರು. ಗುಂಡು ಹಾರಿಸಿದ್ದು ಸೂರಜ್​ ಎಂದು ಗೊತ್ತಾಗುತ್ತಲೇ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.
ಬಾವಾನಾ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಸೂರಜ್​ ಕೆಲಸ ಮಾಡುತ್ತಿದ್ದ. ತನ್ನ ಪರಿಚಿತರೊಬ್ಬರಿಂದ ಅಕ್ರಮವಾಗಿ ಪಿಸ್ತೂಲ್​ ಖರೀದಿಸಿ ತನ್ನ ಬಳಿ ಇಟ್ಟುಕೊಂಡಿದ್ದ. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ಆತ ಇದೀಗ ಅದನ್ನು ಬಳಸಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದಿನಿಂದ ವಾರದ ಲಾಕ್​ಡೌನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
