ಘಾಜಿಯಾಬಾದ್​ :ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ವೃದ್ಧ ಪಾಲಕರನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ರವಿ ಢಾಕ ಎಂಬುವನು ತನ್ನ ತಂದೆ ಸುರೇಂದ್ರ ಢಾಕ(70 ವರ್ಷ) ಮತ್ತು ತಾಯಿ ಸಂತೋಷ್​(63 ವರ್ಷ)ರನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ ಎನ್ನಲಾಗಿದೆ.
ವೃದ್ಧ ದಂಪತಿಯು ತಮ್ಮ ಹಿರಿಯ ಮಗ ಗೌರವ್ ಜೊತೆ ಘಾಜಿಯಾಬಾದ್​​ನ ಲೋನಿ ಎಂಬಲ್ಲಿ ವಾಸಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಗೌರವ್ ಮರಣ ಹೊಂದಿದ ನಂತರ ಆಸ್ತಿಯನ್ನೆಲ್ಲ ಆತನ ಹೆಂಡತಿಗೆ ಉಯಿಲು ಬರೆಯಬೇಕೆಂದು ನಿರ್ಧರಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬಲರಾಮ್​ ನಗರದ ನಿವಾಸಿ ಕಿರಿಯ ಮಗ ರವಿ, ಕೆಲವು ಸಮಯದಿಂದ ಅವರನ್ನು ಸಾಯಿಸುವ ಸಂಚು ನಡೆಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ನನ್ನ ಮೇಲೆ ಅತ್ಯಾಚಾರ-ಕೊಲೆ ಯತ್ನ ನಡೆದಿದೆ, ಯಾರೊಬ್ಬರೂ ನೋವು ಆಲಿಸುತ್ತಿಲ್ಲ… ಎಂದು ಕಣ್ಣೀರಿಟ್ಟ ನಟಿ
ಜೂನ್​ 11 ರಂದು ತನ್ನ ಅತ್ತಿಗೆ ಮನೆಯಲ್ಲಿ ಇಲ್ಲದ್ದನ್ನು ತಿಳಿದುಕೊಂಡ ಆರೋಪಿ ರವಿ, ಬೆಳಿಗ್ಗೆ 9 ರ ಸುಮಾರಿಗೆ ಹೋಗಿದ್ದೇ ತಂದೆಯನ್ನು ನೆಲಮಹಡಿಯಲ್ಲಿ ವೈರ್​ನಿಂದ ಉಸಿರುಗಟ್ಟಿಸಿ ಸಾಯಿಸಿದ. ನಂತರ ಮೇಲ್ಮಹಡಿಯಲ್ಲಿದ್ದ ತಾಯಿಯನ್ನು ಬಟ್ಟೆಯಿಂದ ಉಸಿರುಗಟ್ಟಿಸಿ ಸಾಯಿಸಿದ. ದರೋಡೆ ನಡೆದಿದೆ ಎಂದು ನಂಬಿಸಲು ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ತನ್ನ ಸ್ನೇಹಿತರೊಂದಿಗೆ ಇಸ್ಪೀಟು ಆಡಲು ತೆರಳಿದ ಎನ್ನಲಾಗಿದೆ.
ಸಂಜೆ ಮನೆಗೆ ಹಿಂತಿರುಗಿದಾಗ ಘಟನೆಯಿಂದ ಶಾಕ್ ಆಗಿರುವಂತೆ ನಟಿಸುತ್ತಾ ಪೊಲೀಸರಿಗೆ ಕರೆ ಮಾಡಿದ. ಆದರೆ ಆತನ ಮಾತನ್ನು ನಂಬದ ಪೊಲೀಸರು, ಅವನನ್ನೇ ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಗೆ ಮಾಡಿಕೊಂಡ ಎನ್ನಲಾಗಿದೆ.(ಏಜೆನ್ಸೀಸ್)
PHOTOS| ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿ! ಎಲ್ಲೆಡೆ ಟ್ರಾಫಿಕ್​ ಜಾಮ್​

70,421 ಹೊಸ ಕರೊನಾ ಪ್ರಕರಣ; 24 ಗಂಟೆಗಳಲ್ಲಿ 3,921 ಸಾವು

ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 12 =
Remember me
