ನವದೆಹಲಿ:ಬಡತನದಿಂದಾಗಿ ತನ್ನ ಮೂರು ವರ್ಷದ ಮಗನನ್ನು ಮಾರಾಟಕ್ಕಿಟ್ಟಿದ್ದ ತಂದೆ, ಆತನನ್ನು ಖರೀದಿಸುವವರು ಸಿಗಲಿಲ್ಲವೆಂದು ನೊಂದು ಕೊಂದು ಹಾಕಿದ್ದಾನೆ. ಮೊಹಮದ್ ನೌಷಾದ್ ಎಂಬಾತ ಮಗನನ್ನು ಕೊಂದ ತಂದೆ.
ಬಡತನದಿಂದ ಬಳಲುತ್ತಿದ್ದ ಮೊಹಮದ್​ ನೌಷಾದ್ ಕುಡಿತ ಹಾಗೂ ಜೂಜಿನ ಚಟ ಹೊಂದಿದ್ದ. ಅದಕ್ಕೆ ಹಣ ಹೊಂದಿಸಲಾಗದೆ ತನ್ನ ಮೂರು ವರ್ಷದ ಮಗನನ್ನು ಮೂರು ಲಕ್ಷ ರೂಪಾಯಿಗೆ ಮಾರಾಟಕ್ಕಿಟ್ಟಿದ್ದ. ಈ ಬಗ್ಗೆ ಪತ್ನಿಯ ವಿರೋಧ ಇದ್ದಿದ್ದರಿಂದ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಆದರೆ ಮಂಗಳವಾರ ನೆರೆಮನೆಯಿಂದ ಮೊಬೈಲ್​ ಫೋನ್​ ಚಾರ್ಜರ್​ ತರಲು ಹೆಂಡತಿಯನ್ನು ಕಳಿಸಿದ್ದ ನೌಷಾದ್, ಆಕೆ ಮರಳುವಷ್ಟರಲ್ಲಿ ಮಗನನ್ನು ಕೊಂದುಹಾಕಿದ್ದ.
ಉಸಿರುಗಟ್ಟಿಹೋಗಿದ್ದ ಮಗನನ್ನು ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆತನನ್ನು ಉಳಿಸಿಕೊಳ್ಳಲು ಆಗಿಲ್ಲ. ನೌಷಾದ್​ನ ಈ ಕೃತ್ಯದ ಕುರಿತು ಆತನ ತಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬುಧವಾರ ನೌಷಾದ್​​ನನ್ನು ಬಂಧಿಸಿದ್ದಾರೆ. ಅಂದಹಾಗೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಧನೊರಾ ಎಂಬಲ್ಲಿ ಘಟನೆ ನಡೆದಿದೆ.
ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
