ನವದೆಹಲಿ:ಕೊಲೆ ಮಾಡುವುದಲ್ಲದೆ ತುಂಡು ತುಂಡಾಗಿ ಕತ್ತರಿಸಿ ಎಸೆಯುವಂಥ ಪ್ರಕರಣಗಳು ಶ್ರದ್ಧಾ ವಾಕರ್​ ಕೊಲೆ ಬಳಿಕ ಹೆಚ್ಚಾಗಿರುವುದು ಕಂಡುಬಂದಿದ್ದು, ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಪತಿಯೇ ಕೊಲೆಗೈದು ಪೀಸ್ ಪೀಸ್ ಮಾಡಿ ಎಸೆದಿದ್ದಾನೆ. ಅಂಥ ಒಂದು ತುಂಡನ್ನು ನಾಯಿ ತಿನ್ನಲಾರಂಭಿಸಿದ್ದರಿಂದ ಪ್ರಕರಣ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್​ನ ಸಾಹಿಬ್​ಗಂಜ್ ಜಿಲ್ಲೆಯ 28 ವರ್ಷದ ದಿಲ್​ದಾರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಎರಡನೇ ಪತ್ನಿ, 22 ವರ್ಷದ ರಬಿತಾ ಪಹದಿನ್ ಎಂಬಾಕೆಯನ್ನು ಕೊಲೆ ಮಾಡಿದ್ದ. ಈತ ತನ್ನ ಪತಿಯನ್ನು ಕೊಲೆ ಮಾಡಿ, ತುಂಡುತುಂಡಾಗಿಸಿದ್ದಲ್ಲದೆ ಅದನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ.
ಸಾಹಿಬ್​ಗಂಜ್​​ನ ಬೊರಿಯೊ ಬ್ಲಾಕ್​ನಲ್ಲಿನ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರದ ಬಳಿ ನಾಯಿ ತಿನ್ನುತ್ತಿದ್ದ ಮಾಂಸದ ತುಂಡು ಮಾನವ ದೇಹದ ಭಾಗದಂತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾಗ ಅದು ಮನುಷ್ಯನ ದೇಹದ ಭಾಗ ಎಂಬುದು ಖಚಿತಗೊಂಡಿದ್ದು, ಬಳಿಕ ತನಿಖೆಗಿಳಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಜಿಲ್ಲೆಯ ವಿವಿಧ ಭಾಗಗಳಿಂದ ಕನಿಷ್ಠ 13 ತುಂಡುಗಳನ್ನು ಪತ್ತೆ ಮಾಡಲಾಗಿದೆ, ಕೆಲವೊಂದು ಭಾಗ ಮನೆಯೊಂದರಲ್ಲಿ ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಸಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.
ದಿಲ್​ದಾರ್ ತಾಯಿ ರಬಿತಾಳನ್ನು ಆಕೆಯ ಸಹೋದರ ಮನೆಗೆ ಶುಕ್ರವಾರ ಕರೆದೊಯ್ದಿದ್ದು, ಅಲ್ಲಿ ಆಕೆಯ ಕೊಲೆ ನಡೆದಿದ್ದು, ಕಬ್ಬಿಣ ಕಟ್ ಮಾಡುವ ಯಂತ್ರದಿಂದ ದೇಹವನ್ನು ತುಂಡು ಮಾಡಲಾಗಿದೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಶನಿವಾರ ಪೊಲೀಸರು ಬೆರಳು, ಭುಜ, ನಿತಂಬ, ಕೈ, ಸೊಂಟ, ಹೊಟ್ಟೆಗಳ ಭಾಗವನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಅಂಗನವಾಡಿ ಕೇಂದ್ರದ ಬಳಿ ಎರಡು ಬೆರಳಿನ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. ಬಳಿಕ ದಿಲ್​ದಾರ್​​ನ ಎಲ್ಲ ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆತನ ಮಾವನ ಮನೆಯ ಟೆರೇಸ್​ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಹೀಗಾಗಿ ಆತನನ್ನು ವಶಕ್ಕೆ ಪಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ದಂಪತಿ ಪ್ರೇಮವಿವಾಹವಾಗಿದ್ದು, ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು, ಇತ್ತೀಚೆಗೆ ಅವರ ದಾಂಪತ್ಯ ಕಲಹ ತೀವ್ರಗೊಂಡಿತ್ತು ಎಂಬುದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದು, ತನಿಖೆಯೂ ಮುಂದುವರಿದಿದೆ. –ಏಜೆನ್ಸೀಸ್
ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
