ಹೈದರಾಬಾದ್:ಇಲ್ಲಿನ ಬೇಗಂ ಬಜಾರ್​ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿಯ ನಾಲ್ಕು ವರ್ಷದ ಪುತ್ರಿ ಮತ್ತು ಆರು ವರ್ಷದ ಪುತ್ರನೆದುರೇ ಆತ ಉಸಿರುಗಟ್ಟಿಸಿ ಪತ್ನಿಯನ್ನು ಕೊಂದಿದ್ದಾನೆ. ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿಯ ಒಂದು ಮತ್ತು ಎರಡು ವರ್ಷದ ಇನ್ನಿಬ್ಬರು ಮಕ್ಕಳು ಈ ಸಂದರ್ಭದಲ್ಲಿ ಮಲಗಿದ್ದರು ಎನ್ನಲಾಗಿದೆ.
ರುಬೀನಾ (26) ಕೊಲೆಯಾದಾಕೆ. ಆಟೋರಿಕ್ಷಾ ಚಾಲಕ ಮೊಹಮ್ಮದ್​ ಶಬ್ಬೀರ್​ ಆತ್ಮಹತ್ಯೆ ಮಾಡಿಕೊಂಡವನು. ಗುರುವಾರ ರಾತ್ರಿ ದಂಪತಿಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಜೋರು ಜಗಳವಾಗಿತ್ತು. ಮಧ್ಯಪ್ರವೇಶಿಸಿದ ನೆರೆಹೊರೆಯವರು ದಂಪತಿಯನ್ನು ಸಮಾಧಾನಿಸಿ ಹೋಗಿದ್ದರು. ಆನಂತರ ದಂಪತಿ ತಮ್ಮ ಮಕ್ಕಳೊಂದಿಗೆ ಮಲಗಿದ್ದರು ಎನ್ನಲಾಗಿದೆ.
ಆದರೆ, ನಸುಕಿನ 3 ಗಂಟೆಯಲ್ಲಿ ಎದ್ದುಬಂದ ಮೊಹಮ್ಮದ್​ ಶಬ್ಬೀರ್​ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ದಂಪತಿಯ ನಾಲ್ಕು ವರ್ಷದ ಪುತ್ರಿ ಮತ್ತು ಆರು ವರ್ಷದ ಪುತ್ರ ಇದನ್ನು ನೋಡಿದ್ದಾರೆ. ಬಳಿಕ ಈ ಇಬ್ಬರು ಮಕ್ಕಳು ನೋಡುತ್ತಿರುವಂತೆ ಮೊಹಮ್ಮದ್​ ಶಬ್ಬೀರ್​ ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಸಾನಿಯಾ ನೋಡಲು ಶೋಯಿಬ್‌ಗೆ ಸಿಕ್ತು ಗ್ರೀನ್ ಸಿಗ್ನಲ್..!
ಶುಕ್ರವಾರ ಬೆಳಗ್ಗೆ ಎಷ್ಟು ಎಬ್ಬಿಸಿದರೂ ಅಮ್ಮ ಏಳದಿದ್ದಾಗ ಆತಂಕಗೊಂಡ ಆರು ವರ್ಷದ ಪುತ್ರ ಹೊರಹೋಗಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾನೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಬೇಗಂ ಬಜಾರ್​ನ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಮಧುಮೋಹನ್​, ಕಳೆದ ಕೆಲವು ತಿಂಗಳಿಂದ ದಂಪತಿ ಸಣ್ಣಪುಟ್ಟ ವಿಷಯಕ್ಕೂ ಜಗಳವಾಡಿಕೊಳ್ಳುತ್ತಿದ್ದರು. ರುಬೀನಾ ತನ್ನ ತವರಿನವರಿಗೆ ಕರೆ ಮಾಡಿದಾಗಲೆಲ್ಲ ಆಕೆ ತನ್ನ ವಿರುದ್ಧ ದೂರುತ್ತಿದ್ದಾಳೆ ಎಂದೇ ಶಬ್ಬೀರ್​ ಅನುಮಾನಿಸುತ್ತಿದ್ದ. ಇದು ದಂಪತಿ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಕುಟುಂಬದ ಹಿರಿಯರು ಮತ್ತು ನೆರೆಹೊರೆಯವರು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸುತ್ತಿದ್ದರು. ಆದರೆ, ಈ ಬಾರಿ ಜಗಳ ವಿಪರೀತಕ್ಕೆ ಹೋಗಿ ಅನಾಹುತವಾಗಿದೆ. ಇದೀಗ ಮಕ್ಕಳು ಅನಾಥರಾಗಿದ್ದು, ಅಪ್ಪ-ಅಮ್ಮನಿಗೆ ಏನಾಯಿತು ಎಂಬುದು ಅರಿಯದ ಸ್ಥಿತಿ ಅವರದ್ದಾಗಿದೆ ಎಂದು ಹೇಳಿದರು.
ನಾಳೆಯೇ ಭಾರಿ ಪ್ರಮಾಣದ ಸೈಬರ್ ಅಟ್ಯಾಕ್ ಶುರು: ಎಚ್ಚರಿಸಿದೆ ಸರ್ಕಾರ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
