ಚೆನ್ನೈ:ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್​ ಜಿಲ್ಲೆಯ ಭಾನುವಾರ ರಾತ್ರಿ ನಡೆದಿದೆ.
ಚಿತ್ರಾ ಕೊಲೆಯಾದ ದುರ್ದೈವಿ. ಅಮೃತಲಿಂಗಂ (38) ಬಂಧಿತ ಪತಿ. ಈತ ದಿಂಡಿಗಲ್​ ಮೂಲದವನು. ದಂಪತಿ ತಿರುಪ್ಪೂರ್​ನ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದರು. ತೆನ್ನಂಪಾಳ್ಯಂನ ತರಕಾರಿ ಮಾರುಕಟ್ಟೆಯಲ್ಲಿ ಅಮೃತಲಿಂಗಂ ದಿನಗೂಲಿ ನೌಕರನಾಗಿದ್ದ. ಚಿತ್ರಾ ಗಾರ್ಮೆಂಟ್​ ಕಾರ್ಖಾನೆಯ ಉದ್ಯೋಗಿಯಾಗಿದ್ದಳು. ಈ ಮೊದಲು ಟಿಕ್​ಟಾಕ್​ ವಿಡಿಯೋಗಳನ್ನು ಮಾಡುತ್ತಿದ್ದ ಚಿತ್ರಾ, ಟಿಕ್​ಟಾಕ್​ ಬ್ಯಾನ್​ ಆದ ಬಳಿಕ ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಳು. ಅಲ್ಲದೆ, ಹೆಚ್ಚಾಗಿ ರೀಲ್ಸ್​ನಲ್ಲೇ ಚಿತ್ರಾ ಸಮಯ ಕಳೆಯುತ್ತಿದ್ದಳು.
ಇನ್​ಸ್ಟಾಗ್ರಾಂನಲ್ಲಿ 33 ಸಾವಿರ ಫಾಲೋವರ್ಸ್​ ಹೊಂದಿದ್ದಳು. ಫಾಲೋವರ್ಸ್ ಹೆಚ್ಚಾಗುತ್ತಾ ಆಕೆಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಹುಟ್ಟಿಕೊಂಡಿತು. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರ ನಡುವೆ ಚಿತ್ರಾ, ಗಂಡನೊಂದಿಗೆ ಮತ್ತೆ ಜಗಳವಾಡಿಕೊಂಡು ಎರಡು ತಿಂಗಳ ಹಿಂದೆ ತವರಿಗೆ ಹೋಗಿದ್ದಳು. ಬಳಿಕ ಮಗಳ ಮದುವೆಗೆಂದು ಮನೆಗೆ ಮರಳಿದ್ದಳು.
ಮದುವೆ ಮುಗಿದ ಬಳಿಕ ಮತ್ತೆ ಚೆನ್ನೈಗೆ ತೆರಳಲು ಚಿತ್ರಾ ಮುಂದಾಗಿದ್ದಳು. ಆದರೆ, ಆಕೆ ಹೋಗುವುದನ್ನು ಅಮೃತಲಿಂಗಂ ತಡೆದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ತಾಳ್ಮೆ ಕಳೆದುಕೊಂಡ ಅಮೃತಲಿಂಗಂ ಶಾಲು ತೆಗೆದುಕೊಂಡು ಚಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಚಿತ್ರಾ ಮೂರ್ಛೆ ಹೋದ ಕೂಡಲೇ ಅಮೃತಲಿಂಗಂ ಮನೆ ಬಿಟ್ಟು ಹೋಗಿದ್ದ. ತನ್ನ ಕೃತ್ಯದ ಬಗ್ಗೆ ಮಗಳಿಗೆ ಮಾಹಿತಿ ನೀಡಿದಾಗ, ಮಗಳು ಮನೆಗೆ ಬಂದು ಪರಿಶೀಲಿಸಿದ್ದಾಳೆ. ಅಷ್ಟರಲ್ಲಾಗಲೇ ಚಿತ್ರಾ ಮೃತಪಟ್ಟಿದ್ದಳು. ಬಳಿಕ ಮಗಳು ಇದನ್ನು ಪೊಲೀಸರಿಗೆ ತಿಳಿಸಿದ್ದು, ಇದೀಗ ಪತಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

2 ತಿಂಗಳ ಹಿಂದೆ ಪ್ರಿಯಕರ ಕೊಟ್ಟ ಜ್ಯೂಸ್​ ಕುಡಿದಿದ್ದರಿಂದ ಮಗಳ ಸಾವು? ತಾಯಿಯ ಆರೋಪಕ್ಕೆ ಪುಷ್ಠಿ ನೀಡಿದ ವೈದ್ಯರ ಹೇಳಿಕೆ

ಲಿಂಗ ಪರಿವರ್ತನೆ ಮಾಡಿಕೊಂಡು ವಿದ್ಯಾರ್ಥಿನಿಯನ್ನೇ ಮದುವೆಯಾದ ಶಿಕ್ಷಕಿ!

ನಾನು ಭಾರತೀಯ… ಮನುವಾದಿಗಳು ನಮ್ಮನ್ನು ಸಿಕ್ಕಿ ಹಾಕಿಸುವ ಕೆಲಸ ಮಾಡ್ತಿದ್ದಾರೆ; ಸತೀಶ್ ಜಾರಕಿಹೊಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 10 =
Remember me
