ಗುವಾಹಟಿ:ಕೋವಿಡ್ ಲಾಕ್‌ಡೌನ್ ಪ್ರೇಮಕಥೆಯು ಭೀಕರವಾದ ತ್ರಿವಳಿ ಕೊಲೆಯಲ್ಲಿ ಕೊನೆಗೊಂಡಿದೆ. ಈ ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ನಡೆದಿದೆ.
ಗೋಲಾಘಾಟ್ ಜಿಲ್ಲೆಯಲ್ಲಿ 2020ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 25 ವರ್ಷದ ನಜಿಬುರ್ ರೆಹಮಾನ್ ಬೋರಾ ಮತ್ತು 24 ವರ್ಷದ ಸಂಘಮಿತ್ರ ಘೋಷ್ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ನಂತರ ಇಬ್ಬರು ನಡುವೆ ಪ್ರೀತಿಯಾಗಿ ಪರಸ್ಪರ ಭೇಟಿ ಮಾಡಿ ಇಬ್ಬರು ಮದುವೆಯಾಗಿದ್ದಾರೆ. ಸದ್ಯ ಈ ಜೋಡಿಗೆ ಒಂಬತ್ತು ತಿಂಗಳ ಗಂಡು ಮಗುವಿದೆ. ಆದರೆ, ಇತ್ತೀಚೆಗೆ ಪತಿ ಇಕೆಯ ಪೋಷಕರೂ ಸೇರಿದಂತೆ ಯುವತಿಯನ್ನು ಕೊಲೆ ಮಾಡಿದ್ದಾನೆ. ಒಂಬತ್ತು ತಿಂಗಳ ಮಗನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ:ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ
ನಡೆದಿದ್ದೇನು?:25 ವರ್ಷದ ನಜಿಬುರ್ ರೆಹಮಾನ್ ಬೋರಾ ಮತ್ತು 24 ವರ್ಷದ ಸಂಘಮಿತ್ರ ಘೋಷ್ ಫೇಸ್‌ಬುಕ್ ಮೂಲಕ ಸಂಪರ್ಕಕ್ಕೆ ಬಂದರು. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ನಜೀಬುರ್ ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್. ಕೋಲ್ಕತ್ತಾದಲ್ಲಿ ವಿವಾಹವಾದರು. ಸಂಘಮಿತ್ರಳ ಪೋಷಕರು ಅವಳ ಮೇಲೆ ಕಳ್ಳತನದ ಆರೋಪ ಮಾಡಿದರು. ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆಯನ್ನು ಬಂಧಿಸಿ ತಿಂಗಳುಗಟ್ಟಲೆ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಜಾಮೀನು ಪಡೆದ ನಂತರ ಆಕೆ ತನ್ನ ಪೋಷಕರ ಮನೆಗೆ ಮರಳಿದ್ದಳು.
ಇದನ್ನೂ ಓದಿ:ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ
ಜನವರಿ 2022ರಲ್ಲಿ, ಸಂಘಮಿತ್ರ ಮತ್ತು ನಜೀಬುರ್ ಮತ್ತೆ ಮನೆ ತೊರೆದರು. ಈ ಬಾರಿ ಚೆನ್ನೈಗೆ ಹೋಗಿ ಐದು ತಿಂಗಳು ತಂಗಿದ್ದರು. ಆಗಸ್ಟ್‌ನಲ್ಲಿ ದಂಪತಿ ಗೋಲಾಘಾಟ್‌ಗೆ ಹಿಂತಿರುಗಿದಾಗ ಸಂಘಮಿತ್ರ ಗರ್ಭಿಣಿಯಾಗಿದ್ದಳು. ಆ ನಂತರ ಅವರಿಬ್ಬರೂ ನಜೀಬುರನ ಮನೆಯಲ್ಲಿ ತಂಗಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅವರಿಗೆ ಒಬ್ಬ ಮಗ ಜನಿಸಿದನು. ಆದರೆ, ಮಗ ಹುಟ್ಟಿದ ನಾಲ್ಕು ತಿಂಗಳ ನಂತರ ಪತಿ-ಪತ್ನಿಯ ನಡುವೆ ಕಲಹ ಉಂಟಾಗಿದೆ. ಮಾರ್ಚ್​​​ನಲ್ಲಿ ಸಂಘಮಿತ್ರ ಮಗನನ್ನು ಕರೆದುಕೊಂಡು ಹುಟ್ಟೂರಿಗೆ ಹೋಗಿದ್ದಳು. ನಜೀಬುರ್ ತನಗೆ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದಾದ ಬಳಿಕ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದಿದ್ದನು.
ಇದನ್ನೂ ಓದಿ:ಡ್ಯಾನ್ಸ್​, ಜಗಳ ಎಲ್ಲಾ ಆಯ್ತು; ಈಗ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧ
ಜೈಲಿನಿಂದ ಹೊರಬಂದ ನಂತರ ನಜೀಬುರ್ ತನ್ನ ಮಗುವನ್ನು ನೋಡಲು ತನ್ನ ಹೆಂಡತಿಯ ಮನೆಗೆ ಹೋದನು. ಪತ್ನಿ ಮತ್ತು ಅವರ ಕುಟುಂಬಸ್ಥರು ಆತನನ್ನು ತಡೆದಿದ್ದಾರೆ. ಮಗುವನ್ನು ನೋಡಲು ಬಿಡದೇ ನಜೀಬುರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಜೀಬುರ್ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಈ ವಿವಾದ ನಡೆಯುತ್ತಿರುವಾಗಲೇ ಸೋಮವಾರ ಮಧ್ಯಾಹ್ನ ಮತ್ತೊಮ್ಮೆ ನಜೀಬುರ್ ಅವರ ಪತ್ನಿ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಘರ್ಷಣೆ ನಡೆದಿದೆ.
ಈ ಘರ್ಷಣೆಯಲ್ಲಿ ನಜೀಬುರ್, ತನ್ನ ಪತ್ನಿ ಸಂಘಮಿತ್ರ ಮತ್ತು ಆಕೆಯ ಪೋಷಕರನ್ನು ಕೊಂದಿದ್ದಾನೆ. ಆ ಬಳಿಕ ತನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದ. ಮರುದಿನ ತನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉದ್ಯೋಗಿಗಳಿಗಾಗಿ ಆ್ಯಪಲ್ ತಯಾರಿಸಿದ “ಶೂ” 40 ಲಕ್ಷ ರೂ.ಗೆ ಹರಾಜು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
