ಮೀರತ್​:ಐದು ವರ್ಷಗಳ ಕಾಲ ತಾನು ಹಿಂದು ಎಂದು ಹೇಳಿಕೊಂಡೇ ಆಕೆಯನ್ನು ವಂಚಿಸಿದ. ಆತನ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ತಾಯಿ ಹಾಗೂ ಮಗುವನ್ನು ಕೊಲೆಗೈದು ಆಕೆಯ ಮನೆಯಲ್ಲಿಯೇ ಹೂತು ಹಾಕಿ ಪರಾರಿಯಾಗಿದ್ದಾನೆ.
ದುರಂತವೆಂದರೆ, ಕೈಗೆ ಸಿಕ್ಕ ಆರೋಪಿಯನ್ನು ವಿಚಾರಣೆ ನಡೆಸಿ ಕೈಬಿಟ್ಟ ಪೊಲೀಸರು ಆತನೇ ಕೊಲೆಗಾರ ಎಂಬುದು ತಿಳಿಯುತ್ತಿದ್ದಂತೆ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ;ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?
ಲವ್​ ಜಿಹಾದ್​ನ ಈ ಪ್ರಕರಣ ನಡೆದದ್ದು ಉತ್ತರ ಪ್ರದೇಶದ ಮೀರತ್​ನಲ್ಲಿ. ಬಯಲಿಗೆ ಬಂದದ್ದು ಮಹಿಳೆಯ ಗೆಳತಿ ಚಂಚಲ್​ನಿಂದ. ಗೆಳತಿ ಪ್ರಿಯಾ ಮೂರು ತಿಂಗಳಿನಿಂದ ಕಾಣುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ಕೈಗೊಂಡ ಪೊಲೀಸರಿಗೂ ವಿಷಯ ಏನೆಂಬುದು ಗೊತ್ತಾಗಿರಲಿಲ್ಲ. ಆಕೆಯ ಜತೆ ಸಂಪರ್ಕದಲ್ಲಿದ್ದ ಶಂಷಾದ್​ನನ್ನು ಕರೆಯಿಸಿ ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದರು.
ಇದಾದ ಕೆಲ ದಿನಗಳ ಬಳಿಕ ಮಹಿಳೆ ಮನೆಯ ಆವರಣದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿವೆ. ಅದು ನಾಪತ್ತೆಯಾಗಿದ್ದ ಪ್ರಿಯಾ ಹಾಗೂ ಆಕೆಯ ಮಗಳು ಕಶೀಷ್​ಳದ್ದು ಎಂದು ಗೊತ್ತಾಗಿದೆ.
ಇದನ್ನೂ ಓದಿ;ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ
ಪ್ರಿಯಾಳನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ ಶಂಷಾದ್​ ತಾನು ಹಿಂದು ಆಗಿದ್ದು, ಹೆಸರು ಅಮಿತ್​ ಎಂದು ಹೇಳಿಕೊಂಡಿದ್ದ. ಐದು ವರ್ಷಗಳವರೆಗೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಆದರೆ, ಆತ ಹಿಂದೂ ಅಲ್ಲ, ಮುಸ್ಲಿಂ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಿಯಾ ಆತನಿಂದ ದೂರಾಗಿದ್ದಳು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಭಾರಿ ಜಗಳ ನಡೆದಿತ್ತು. ಮಾರ್ಚ್​ 28ರಂದು ಪ್ರಿಯಾ ಹಾಗೂ ಕಶೀಷ್​ಳನ್ನು ಶಂಷಾದ್​ ಕೊಂದು ಹಾಕಿದ್ದ. ಇಬ್ಬರ ಶವವನ್ನು ಮನೆಯಲ್ಲಿಯೇ ಹೂತು ಹಾಕಿದ್ದ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಶಂಷಾದ್​ ಮೂಲತಃ ಬಿಹಾರ್​ದವನಾಗಿದ್ದ, ಕಳೆದ 10 ವರ್ಷಗಳಿಂದ ಮೀರತ್​ನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
