ಬೆಂಗಳೂರು:ಹಾವನ್ನು ಕೊಂದು ಅದರ ಫೋಟೋ ತೆಗೆದು ನಂತರ ಸೇಡು ತೀರಿಸಿಕೊಳ್ಳುವ ಮಾತನ್ನು ನೀವು ಕೇಳಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ರೀತಿಯ ವಿಡಿಯೋಗಳು ಮತ್ತು ಗ್ರಾಫಿಕ್ಸ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ತುಂಬಾ ಅಪಾಯಕಾರಿಯಾದ, ಹಾವಿಗೆ ಸಂಬಂಧಿಸಿದ ವೈರಲ್ ವಿಡಿಯೋವನ್ನು ಸಹ ನಾವು ನೋಡಿದ್ದೇವೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವಿಗೆ ಮುತ್ತಿಡಲು ಯತ್ನಿಸುತ್ತಿದ್ದು, ಹಾವು ನೀಡಿದ ಪ್ರತಿಕ್ರಿಯೆ ನೋಡಿದರೆ ನಿಮ್ಮ ಪ್ರಾಣ ಕಂಪಿಸದೆ ಇರಲಾರದು.
ಹೌದು, ಈ 22 ಸೆಕೆಂಡುಗಳ ವಿಡಿಯೋ ನೋಡಿದರೆ ನಾವು ನಿಮಗಿಲ್ಲಿ ಹೇಳುತ್ತಿರುವುದು ಚೆನ್ನಾಗಿ ಅರ್ಥವಾಗುತ್ತದೆ. ಕಪ್ಪು ಅಂಗಿ ಧರಿಸಿದ ಯುವಕನೊಬ್ಬ ಹಾವನ್ನು ಕೈಯಲ್ಲಿ ಹಿಡಿದು ಚುಂಬಿಸುತ್ತಿದ್ದಾಗ ಹಾವು ತನ್ನ ದೈತ್ಯಾಕಾರದ ರೂಪವನ್ನು ತೋರಿಸಿ, ಕುಟುಕಿದೆ. ಹಾವು ಕಚ್ಚಿದ ತಕ್ಷಣ ಯುವಕ ದಿಗ್ಭ್ರಾಂತಗೊಂಡಿದ್ದಾನೆ. ಹಾವು ಕುಟುಕಿದ್ದರಿಂದ ಯುವಕ ಸಾಯಬಹುದೇ ಎಂಬ ಭಯ ಅಲ್ಲಿ ನಿಂತ ಜನರ ಮನದಲ್ಲಿ ಮೂಡಿತ್ತು.
ಆದರೆ ನಂತರ ಏನಾಯಿತು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಹಾವು ಕಚ್ಚಿದ ನಂತರ ಆತ ನಿಂತಿರುವ ರೀತಿ ನೋಡಿದರೆ ಹಾವಿನ ಕಡಿತದಿಂದ ಯುವಕನಿಗೆ ಯಾವುದೇ ತೊಂದರೆಯಾಗಿಲ್ಲ. ಹಾವು ಕಚ್ಚುವ ಮುನ್ನವೇ ಆತ ದೂರವಿದ್ದಂತೆ ತೋರುತ್ತದೆ.
This is horrible💀pic.twitter.com/nk52HatJsN
— Ghar Ke Kalesh (@gharkekalesh)March 28, 2024

ಸಾರ್ವಜನಿಕರ ಕಾಮೆಂಟ್ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಜನರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು “ನಾನು ಹಾವಿಗೆ ಮುತ್ತಿಟ್ಟಾಗ ಅದಕ್ಕೆ ಪ್ರತಿಯಾಗಿ ಹಾವು ಮುತ್ತಿಕ್ಕಿತು” ಎಂದು ಬರೆದುಕೊಂಡಿದ್ದಾರೆ. ಅಂದರೆ ಹಾವು ಪ್ರೀತಿಗೆ ಪ್ರತಿಯಾಗಿ ಪ್ರೀತಿಯನ್ನು ನೀಡಿತೆಂದು ಹೇಳಿದ್ದಾರೆ. ಮತ್ತೋರ್ವ ಬಳಕೆದಾರರು ” ಮುಂದೆ ಸಹೋದರನಿಗೆ ಏನಾಯ್ತು” ಎಂದೆಲ್ಲಾ ಪ್ರಶ್ನಿಸಿರುವುನ್ನು ನಾವಿಲ್ಲಿ ನೋಡಬಹುದು.
ಶುಭ ಶುಕ್ರವಾರದಂದೇ ಕಂದಕಕ್ಕೆ ಬಿದ್ದ ಬಸ್: 45 ಮಂದಿಯೂ ಸಾವು, ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಬಾಲಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
