ಇಟಾನಗರ:ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಅಪಘಾತದಿಂದಾಗಿ ಮೃತರಾದ ಗರ್ಭಿಣಿ ಮೀನಾ ಲಿಶಿ ಅವರ ಸಾವಿನಲ್ಲಿ ಬೇರೆಯದ್ದೇ ಕೈವಾಡಗಳು ಕಾಣಿಸಿಕೊಂಡಿವೆ. ಇದು ಆಕಸ್ಮಿಕ ಅಪಘಾತವಲ್ಲ ಬದಲಾಗಿ ಪೂರ್ವ ನಿಯೋಜಿತ ಕೊಲೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮದುವೆಯಾದ ಕ್ರಷ್​​ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒತ್ತಾಯಿಸಿದ; ಒಪ್ಪದಿದ್ದಾಗ ಆತ ಮಾಡಿದ್ದೇನು?
ಮೀನಾ ಲಿಶಿ ಅವರು ಮಾಜಿ ಶಾಸಕರ ಮಗನಾದ ರೋನ್ನಿ ಲಿಶಿ ಅವರ ಪತ್ನಿ. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು, ನವೆಂಬರ್​ 5ರಂದು ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿದ್ದು, ಆಕೆ ಮೃತರಾಗಿದ್ದಾರೆ ಎಂದು ವರದಿಯಾಗಿತ್ತು.
ಈ ಘಟನೆಯ ನಿಜಾಂಶ ಹೀಗಿದೆ. ಮೀನಾ ಅವರ ಪತಿ ರೋನ್ನಿ, ಚುಮಿ ತಯಾ ಹೆಸರಿನ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಮೇಲಿದ್ದ ಪ್ರೀತಿಯಿಂದಾಗಿ ಹೆಂಡತಿ ಬೇಡವೆನಿಸಿದೆ. ಅದೇ ಕಾರಣಕ್ಕೆ ಮೀನಾ ಅವರನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ. ಚುಮಿ ಮತ್ತು ರೋನ್ನಿ ಇಬ್ಬರೂ ಸೇರಿ ಕೊಲೆ ಯೋಜನೆ ಹಾಕಿದ್ದಾರೆ. ಯೋಜನೆಯಂತೆ ತನ್ನ ಸ್ನೇಹಿತನೊಬ್ಬನ ಸಹಾಯದಿಂದ ಒಬ್ಬ ಸುಫಾರಿ ಕಿಲ್ಲರ್​ನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ:ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ
ಪತ್ನಿಯನ್ನು ಕೆಲಸದ ನಿಮಿತ್ತ ಕಾರಿನಲ್ಲಿ ಕಳಿಸುವಾಗ ಸುಫಾರಿ ಕಿಲ್ಲರನ್ನೇ ಡ್ರೈವರ್​ ಆಗಿ ಕಳುಹಿಸಲಾಗಿದೆ. ಆತ ಒಂದು ಸ್ಥಳದಲ್ಲಿ ಕಾರು ನಿಲ್ಲಿಸಿ, ಮೀನಾಳ ತಲೆ ಮೇಲೆ ಸುತ್ತಿಗೆಯಿಂದ ಹೊಡೆದಿದ್ದಾನೆ. ನಂತರ ಕಾರನ್ನು ಹಳ್ಳಕ್ಕೆ ತಳ್ಳಿದ್ದಾನೆ. ನೋಡುವವರಿಗೆ ಇದೊಂದು ಅಪಘಾತದ ರೀತಿಯಲ್ಲಿ ಕಾಣುವಂತೆ ಮಾಡಿದ್ದಾನೆ. ಈ ಕೊಲೆಗೆ ಸುಫಾರಿ ಕಿಲ್ಲರ್​ 10 ಲಕ್ಷ ಹಣ ಪಡೆದಿದ್ದಾನೆ ಎನ್ನಲಾಗಿದೆ.
ಪೊಲೀಸರ ಸೂಕ್ಷ್ಮ ತನಿಖೆಯಲ್ಲಿ ಸುಫಾರಿ ಕಿಲ್ಲರ್​ ಬಗ್ಗೆ ಸುಳಿವು ಸಿಕ್ಕಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ತಿಳಿದುಬಂದಿದೆ. ಇದೀಗ ಮೀನಾ ಅವರ ಪತಿ, ಅತನ ಪ್ರಿಯತಮೆ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)
ವಿವಾಹಿತ ಮಹಿಳೆಯನ್ನು ರೇಪ್​ ಮಾಡಿ ಎರಡೆರೆಡು ಬಾರಿ ಮಾರಾಟ ಮಾಡಿದ ಪಾಪಿಗಳು; ಬಚಾವಾಗಿದ್ದೇ ಆಶ್ಚರ್ಯ

https://www.vijayavani.net/an-architect-from-gujarat-had-allegedly-been-running-an-online-sex-chatting-and-video-calling-racket-from-his-design-office/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
