ಚೆನ್ನೈ:ಬಿರಿಯಾನಿಗಾಗಿ ಶುರುವಾದ ಜಗಳವು ಯುವಕನೊರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನ ಚೆನ್ನೈ ಬಳಿ ನಡೆದಿದೆ.
ಮೃತನನ್ನು ಬಾಲಾಜಿ(22) ಎಂದು ಗುರುತಿಸಲಾಗಿದ್ದು, ಬಾಲಾಜಿ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ವೇಳೆ ಯುವಕನು ಹೋಟೆಲ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದ. ಅಷ್ಟರಲ್ಲಿ ಮೂವರು ಕುಡಿದ ಅಮಲಿನಲ್ಲಿ ಅದೇ ಹೋಟೆಲ್​ ಗೆ ಬಂದು ಅವರು ಕೂಡ ಬಿರಿಯಾನಿ ಆರ್ಡರ್ ಕೂಡ ಮಾಡಿದ್ದಾರೆ. ಬಾಲಾಜಿ ಮೊದಲು ಆರ್ಡರ್ ಮಾಡಿದಂತೆ ಹೋಟೆಲ್​ನವರು ಆತನಿಗೆ ಮೊದಲು ಬಿರಿಯಾನಿ ಬಡಿಸಿದ್ದಾನೆ.
ಇದನ್ನೂ ಓದಿ:ಮದುವೆಯಾದ ಮೂರೇ ತಿಂಗಳಿಗೆ ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ: ಮಗಳ ಬಗ್ಗೆ ತಂದೆ ಹೇಳಿದ್ದು ಹೀಗೆ..
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮೂವರು ಬಿರಿಯಾನಿಗಾಗಿ ಜಗಳವಾಡಿದ್ದು, ಸ್ವಲ್ಪ ಸಮಯದ ನಂತರ ಜಗಳವು ಹೊಡೆದಾಟಕ್ಕೆ ತಿರುಗಿದೆ. ಆಗ ಮೂವರು ಸೇರಿ ಯುವಕನನ್ನು ಥಳಿಸಿ, ಕುಡುಗೋಲಿನಿಂದ ಇರಿದಿದ್ದಾರೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಘಟನೆ ಬಳಿಕ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರೂ, ಕಾರಿನಲ್ಲಿದ್ದ ಜನರು ಯುವಕನಿಗೆ ಸಹಾಯ ಮಾಡಲಿಲ್ಲ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 11 =
Remember me
