ಹರಿಯಾಣ:ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡ ಬಂದ ವ್ಯಕ್ತಿಗೆ ಆಕೆ ಮಾದಕವಸ್ತು ಸೇವಿಸುವಂತೆ ಮಾಡಿ, ಮನೆಯಿಂದ ಚಿನ್ನ, ನಗದು, ಐಫೋನ್ ಕದ್ದು ಪರಾರಿಯಾದ ಘಟನೆ ಹರಿಯಾಣದ ಗುರುಗ್ರಾಮ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಲೋಕೇಶ್​ಗೆ ಥ್ಯಾಂಕ್ಸ್​! ಲಿಯೋ ಹೈನಾ ಸಂದರ್ಶನದ ವಿಡಿಯೋ ವೈರಲ್​
ಹರಿಯಾಣದ ಗುರುಗ್ರಾಮ್‌ನಲ್ಲಿರುವ ವ್ಯಕ್ತಿ ತನ್ನ ಮನೆಯಲ್ಲಿ ಮಹಿಳೆಯ ಮಾತಿನಂತೆ ಮಾದಕವಸ್ತು ಸೇವಿಸಿದ್ದು, ಎಚ್ಚರಗೊಂಡಾಗ ತಾನು ಬಳಸುತ್ತಿದ್ದ ಐಫೋನ್​, ಚಿನ್ನಾಭರಣ ಮತ್ತು 1.78 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದನ್ನು ಪೊಲೀಸರ ಬಳಿ ದೂರಿನ ಮುಖೇನ ಹೇಳಿಕೊಂಡಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ರೋಹಿತ್ ಗುಪ್ತಾ ಎಂದು ಹೇಳಲಾಗಿದ್ದು, ಆತ ನೀಡಿದ ದೂರಿನಲ್ಲಿ ತಾನು ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ಸಾಕ್ಷಿ ಅಲಿಯಾಸ್ ಪಾಯಲ್ ಎಂಬ ಮಹಿಳೆಯನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಮಹಿಳೆ ತಾನು ದೆಹಲಿಯಿಂದ ಬಂದಿದ್ದು, ಪ್ರಸ್ತುತ ತನ್ನ ಚಿಕ್ಕಮ್ಮನೊಂದಿಗೆ ಗುರುಗ್ರಾಮ್‌ನಲ್ಲಿ ವಾಸಿವಿರುವುದಾಗಿ ನನಗೆ ಹೇಳಿದ್ದಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Forbes India Richest List 2023: ಮೊದಲ ಸ್ಥಾನದಲ್ಲಿ ಉದ್ಯಮಿ ಮುಖೇಶ್ ಅಂಬಾನಿ
“ಆಕೆ ನನಗೆ ಕರೆ ಮಾಡಿ ನನ್ನನ್ನು ಭೇಟಿಯಾಗಬೇಕೆಂದು ಹೇಳಿದಳು. ರಾತ್ರಿ 10 ಗಂಟೆಯ ಸುಮಾರಿಗೆ, ಸೆಕ್ಟರ್ 47ರ ಡಾಕ್ಯಾರ್ಡ್ ಬಾರ್ ಬಳಿ ಕರೆದುಕೊಂಡು ಹೋಗಲು ನನಗೆ ತಿಳಿಸಿದಳು. ನಾನು ಅವಳನ್ನು ಕರೆದುಕೊಂಡು ನಂತರ ಅಲ್ಲೇ ಸಮೀಪದ ಅಂಗಡಿಯಿಂದ ಮದ್ಯವನ್ನು ಖರೀದಿಸಿ ನನ್ನ ಮನೆಗೆ ಬಂದೆ” ಎಂದು ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಮನೆಯಲ್ಲಿ ಮಹಿಳೆ ಐಸ್ ತರಲು ಅಡುಗೆಮನೆಗೆ ಹೋಗುವಂತೆ ನನಗೆ ಹೇಳಿದಳು, ಈ ವೇಳೆ ಪಾನೀಯದಲ್ಲಿ ಮಾದಕ ವಸ್ತುವನ್ನು ಸೇರಿಸಿದಳು. ಇದರ ಪರಿಣಾಮ ತುಂಬಾ ತೀವ್ರವಾಗಿತ್ತು. ನಾನು ಬೆಳಗ್ಗೆ ಎದ್ದು ನೋಡಿದಾಗ ಮಹಿಳೆ ನಾಪತ್ತೆಯಾಗಿದ್ದಳು. ಆಗ ನನ್ನ ಬಳಿಯಿದ್ದ ಚಿನ್ನದ ಸರ, ಐಫೋನ್ 14 ಪ್ರೊ, 10,000 ರೂ. ನಗದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಕಾಣೆಯಾಗಿದ್ದವು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಿಮ್ಮ ಮೊಬೈಲ್​ಗೆ ಅಲರ್ಟ್ ಮೆಸೇಜ್ ಬಂದಿಲ್ಲವಾ? ಕಾರಣ ಏನಿರಬಹುದು ಗೊತ್ತಾ?
“ನನ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಸಹಾಯದಿಂದ ಆಕೆ 1.78 ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದಾಳೆ” ಎಂದು ಗುಪ್ತಾ ತಮ್ಮ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ದೂರಿನ ಆಧಾರದ ಮೇರೆಗೆ ಮಹಿಳೆಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಆಕೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).
‘ಲಿಯೋ’ ಸಕ್ಸಸ್​ಗೆ ತಿಮ್ಮಪ್ಪನ ಮೊರೆ ಹೋದ ನಿರ್ದೇಶಕ ಲೋಕೇಶ್ ಕನಕರಾಜ್!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 12 =
Remember me
