ಮುಂಬೈ:ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಎಚ್ಚರಿಕೆಯ ಹೊರತಾಗಿಯೂ ಜನ ಮೋಸ ಹೋಗುತ್ತಿರುವುದು ಮಾತ್ರ ಕಡಿಮೆಯಾಗಿಲ್ಲ.
ಇದೀಗ ಪ್ರಕರಣ ಒಂದರಲ್ಲಿ ವ್ಯಕ್ತಿಯೋರ್ವ ತನ್ನ ಸಹೋದರಿ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಸೈಬರ್​ ವಂಚಕರು ಕಳವು ಮಾಡಿರುವ ಪ್ರಕರಣ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ವೃತ್ತಿಯಲ್ಲಿ ಫರ್ನಿಚರ್​ ಉದ್ಯಮ ನಡೆಸುತ್ತಿರುವ 23 ವರ್ಷದ ಯುವಕನ ನಂಬರಿಗೆ ವಾಟ್ಸ್​ಆ್ಯಪ್​ ಮೂಲಕ ನೀವು ಐಫೋನ್ 14 ಪ್ರೋ ಮ್ಯಾಕ್ಸ್​​ ಗೆದ್ದಿದ್ದೀರಾ ಈ ಲಿಂಕ್​ ಓಪನ್​ ಮಾಡಿ ಎಂಬ ಮೆಸ್ಸೇಜ್​ ಬಂದಿದೆ. ಕೂಡಲೇ ಲಿಂಕ್​ ಓಪನ್​ ಮಾಡಿ ಆನ್​ಲೈನ್​ ಫಾರ್ಮ್​ ಒಂದನ್ನು ಭರ್ತಿ ಮಾಡಿ ನಮೂದಿಸಿದ್ದ ನಂಬರಿಗೆ ಕರೆ ಮಾಡಿದ್ಧಾನೆ.
ಇದನ್ನೂ ಓದಿ:ಪರಿಷತ್​ ಉಪಚುನಾವಣೆ; ಕಾಂಗ್ರೆಸ್​ನಿಂದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಸಚಿವ ಎನ್​.ಎಸ್​. ಬೋಸರಾಜು, ತಿಪ್ಪಣ್ಣಪ್ಪ ಕಣಕ್ಕೆ
ಬಳಿಕ ವಂಚಕ ನಿಮ್ಮ ಐಫೋನ್​ ಈಗಾಗಲೇ ಡೆಲಿವರಗೆ ಸಿದ್ದವಾಗಿದ್ದು, ಕೆಲ ತೆರಿಗೆಗಳನ್ನು ಕಟ್ಟಬೇಕಾಗಿದೆ ಎಂದು ಯುವಕನಿಗೆ ಹೇಳಿದ್ಧಾನೆ. ವಂಚಕನ ಮಾತಿಗೆ ಮರುಳಾದ ಯುವಕ ಆತ ಹೇಳಿದಂತೆ ಹಣ ಸಂದಾಯ ಮಾಡುತ್ತ ಬಂದಿದ್ದಾನೆ. 34ಕ್ಕೂ ಅಧಿಕ ವಹಿವಾಟು ಬಳಿಕ ಎಚ್ಚೆತ್ತ ದುರುದಾರ ತಾನು ಮೋಸ ಹೋಗಿರುವುದನ್ನು ಅರಿತಿದ್ದಾನೆ.
ಕೂಡಲೇ ಆ ನಂಬರಿಗೆ ಮತ್ತೊಮ್ಮೆ ಕರೆ ಮಾಡಿದಾಗ ಸ್ವಿಚ್ಡ್​ ಆಫ್​ ಎಂದು ಬಂದಿದೆ. ತನ್ನ ಸಹೋದರಿ ಮದುವೆಗೆ ಕೂಡಿಟ್ಟಿದ್ದ 4 ಲಕ್ಷ ರೂಪಾಯಿ ಹಣ ಕಳೆದುಕೊಂಡ ಬಗ್ಗೆ ಯುವಕ ಮುಂಬೈ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
