ಸೂರತ್:ಸಿಲ್ವಾಸ್ಸಾದಲ್ಲಿ ಪೆಟ್ರೋಲ್ ಪಂಪ್ ತೆರೆಯಬೇಕೆಂಬ ಆಸೆಯನ್ನು ಕಂಡಿದ್ದ ಅನಾಮಧೇಯ ವ್ಯಕ್ತಿಯೊಬ್ಬರು ತನ್ನ ಕೆಲಸಕ್ಕೆ ಅಗತ್ಯವಿರುವ ಮಾಹಿತಿ ತಿಳಿಯಲೆಂದು ಗೂಗಲ್​ನಲ್ಲಿ ಒಂದಷ್ಟು ವಿಷಯಗಳನ್ನು ಹುಡುಕಿದ್ದಾರೆ. ಈ ವೇಳೆ ಸೈಬರ್​ ವಂಚಕರ ಪಿತೂರಿಗೆ ಸಿಲುಕಿ ಲಕ್ಷಗಟ್ಟಲೇ ಹಣವನ್ನು ಕಳೆದುಕೊಂಡಿದ್ದು, ಮುಂದೆ ಏನು ಮಾಡಬೇಕೆಂಬುದು ತಿಳಿಯದೆ ಕಂಗಲಾಗಿದ್ದಾರೆ.
ಇದನ್ನೂ ಓದಿ:ಮತ್ತೆ ಅಗ್ರಸ್ಥಾನಕ್ಕೇರಿದ ಜೈಪುರ ಪಿಂಕ್‌ ಪ್ಯಾಥರ್ಸ್‌: ಅರ್ಜುನ್‌ ದೇಶ್ವಾಲ್‌ ಮಿಂಚಿನ ಆಟ
ತಾನು ಕಂಡ ದೊಡ್ಡ ಕನಸು ಭಗ್ನಗೊಂಡಿದ್ದು, ಅದರಿಂದ ಹೊರಬರುವುದು ಹೇಗೆ ಎಂಬ ಚಿಂತೆ ವ್ಯಕ್ತಿಯಲ್ಲಿ ಸದ್ಯ ಕಾಡಲಾರಂಭಿಸಿದೆ. ವಂಚಕರ ಜಾಲಕ್ಕೆ ಸಿಲುಕಿದ ವ್ಯಕ್ತಿಯನ್ನು ಸಿಲ್ವಾಸ್ಸಾದ ಸಮರ್ವಾನಿ ಪ್ರದೇಶದ ನಿವಾಸಿ ಹಿಂದೋಚಾ ಎಂದು ಹೇಳಲಾಗಿದೆ. ಪೆಟ್ರೋಲ್ ಪಂಪ್ ತೆರೆಯುವ ಬಗ್ಗೆ ಗೂಗಲ್​ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ ಈ ವಂಚನೆ ನಡೆದಿರುವುದಾಗಿ ವರದಿಯಾಗಿದೆ.
ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆಗೆ ನೆರವು ನೀಡುವುದಾಗಿ ಹೇಳಿಕೊಳ್ಳುವ ವೆಬ್‌ಸೈಟ್‌ ಹುಡುಕಿದ ಹಿಂದೋಚಾ, ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದ ದೂರವಾಣಿ ನಂಬರ್​ಗೆ ಸಂಪರ್ಕಿಸಿದ್ದಾರೆ. ಈ ವೇಳೆ ಕರೆಯಲ್ಲಿ ಮಾತನಾಡಿದ ವ್ಯಕ್ತಿ, ತಾನು ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ. ಇದು ಅಧಿಕೃತ ಎಂದು ದೂರವಾಣಿ ಮೂಲಕ ಮೋಡಿ ಮಾಡಿದ ವಂಚಕನ ಬಲೆಗೆ ಸಿಲುಕಿದ ಸಂತ್ರಸ್ತ, ಆತ ಹೇಳಿದೆಕ್ಕೆಲ್ಲಾ ಒಪ್ಪಿ, ಅರ್ಜಿ ಪ್ರಕ್ರಿಯೆಗೊಳಿಸಲು ಹಾಗೂ ಅನುಮೋದನೆಗಳನ್ನು ಪಡೆಯಲು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆಯ ಮ್ಯಾರಥಾನ್ ಓಟಗಾರ ಕೆಲ್ವಿನ್ ಸಾವು
ವಂಚಕನ ಮನವರಿಕೆ ಮಾತುಗಳಿಗೆ ಬಲಿಯಾದ ಹಿಂದೋಚಾ, ಆತ ನೀಡಿದ ಸೂಚನೆಯಂತೆ ಹಲವು ವಹಿವಾಟುಗಳಲ್ಲಿ ಒಟ್ಟು 63.20 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಇದೆಲ್ಲಾ ನಡೆದು ಕೆಲವು ದಿನಗಳ ನಂತರ ವಂಚಕನಿಗೆ ಕರೆ ಮಾಡಿದರೆ, ಆತನ ಎರಡೂ ಫೋನ್ ನಂಬರ್ ನಾಟ್ ರೀಚಬಲ್ ಆಗಿದೆ.​ ಈ ವೇಳೆ ತಾನು ಮೋಸ ಹೋಗಿರುವುದು ಅರಿತ ಹಿಂದೋಚಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆಯು ಆನ್‌ಲೈನ್ ವಂಚನೆಯ ಹೆಚ್ಚುತ್ತಿರುವ ಅಪಾಯ ಮತ್ತು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಹುಡುಕುವ ವ್ಯಕ್ತಿಗಳ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ ಪ್ರಕರಣದ ತನಿಖೆ ಕೈಗೊಂಡಿರುವ ಸಿಲ್ವಾಸ್ಸಾ ಪೊಲೀಸರು, ವ್ಯಕ್ತಿ ಕಳೆದುಕೊಂಡ ಹಣವನ್ನು ವಂಚಕರಿಂದ ಮರುಪಡೆಯಲು ಹರಸಾಹಸ ಪಡುವಂತಾಗಿದೆ. ಸದ್ಯ ಇದು ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿದೆ.
ಇದನ್ನೂ ಓದಿ:ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ; ಹೋರಾಟ ಮುಂದುವರಿಕೆ ಮುನ್ಸೂಚನೆ
ಸಿಲ್ವಾಸ್ಸಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಆನ್‌ಲೈನ್‌ನಲ್ಲಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳು ಅಥವಾ ಅಧಿಕೃತ ಚಾನಲ್‌ಗಳ ಮೂಲಕ ಪಡೆದ ಮಾಹಿತಿಯನ್ನು ಯಾವಾಗಲೂ ಕ್ರಾಸ್-ಚೆಕ್ ಮಾಡಿ. ಪರಿಶೀಲನಾ ವಿಧಾನಗಳಾಗಿ ಕೇವಲ ದೂರವಾಣಿ ಕರೆಗಳು ಅಥವಾ ಇ-ಮೇಲ್‌ಗಳನ್ನು ಅವಲಂಬಿಸಬೇಡಿ. ಅವರ ಹಕ್ಕುಗಳು ಅಥವಾ ಸಂಬಂಧವನ್ನು ಲೆಕ್ಕಿಸದೆಯೇ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಅಪರಿಚಿತ ವ್ಯಕ್ತಿಗಳು ಹಾಗೂ ಘಟಕಗಳಿಗೆ ಹಣವನ್ನು ವರ್ಗಾಯಿಸಬೇಡಿ” ಎಂದು ಹೇಳಿದರು,(ಏಜೆನ್ಸೀಸ್).
ಈ ನಟನ ಮೊದಲ ಪೇಮೆಂಟ್​ ಕೇವಲ 50 ರೂ.! ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಸ್ಟಾರ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
