ಹೈದರಾಬಾದ್​:ಮದುವೆ ಮನೆಗೆ ಹೋದವರು ಊಟ ಅಥವಾ ಊಟದ ವ್ಯವಸ್ಥೆಯನ್ನು ದೂರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ಮದುವೆ ಮನೆಗೆ ಹೋಗಿ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದು ತಗಾದೆ ತೆಗೆದಿದ್ದಕ್ಕೆ ದೊಡ್ಡ ಗಲಾಟೆಯೇ ಆಗಿದೆ. ಮತ್ತೊಂದೆಡೆ ವಾಗ್ವಾದ ವಿಕೋಪಕ್ಕೆ ಹೋಗಿ ಆತನ ಮಕ್ಕಳು ಎದುರಾಳಿಯನ್ನು ಚಚ್ಚಿ ಕೊಚ್ಚಿ ಸಾಯಿಸಿದ್ದಾರೆ. ಈ ಗಲಾಟೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಕೊಲೆಯೇ ನಡೆದುಹೋದ ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಈ ಘಟನೆಯಲ್ಲಿ ಸುರರಾಮ್​ ಪರಶುರಾಮುಲು (35) ಎಂಬಾತ ಮೃತಪಟ್ಟಿದ್ದು, ಆತನ ಸಹೋದರ ನಾಗರಾಜು ಗಾಯಗೊಂಡಿದ್ದಾನೆ.
ದಚಾರಾಮ್​ ಗ್ರಾಮದ ತತಿಪಾಮುಲು ಮಹೇಶ್​ ಎಂಬಾತ ಜಂಗಾವೊನ್ ಜಿಲ್ಲೆಯ ಪಾಕಳ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ. ಮದುಮಗನ ಕಡೆಯವರು ಮದುಮಗಳ ಮನೆಯಲ್ಲಿನ ಔತಣಕ್ಕಾಗಿ ಪಾಕಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮದುವೆ ಔತಣಕ್ಕೆ ಹೋಗಿದ್ದ ದಚಾರಾಮ್ ಸುರರಾಮ್​​ ವೆಂಕಟಯ್ಯ ಎಂಬಾತ ಮಟನ್​ ಕರಿಯಲ್ಲಿ ಪೀಸ್ ಇಲ್ಲ ಎಂದು ತಗಾದೆ ತೆಗೆದಿದ್ದ. ಆದರೆ ಆಗ ದಚಾರಾಮ್​ ಗ್ರಾಮದ ಹಿರಿಯ ಚಂದ್ರಯ್ಯ ಎಂಬಾತ ಸಮಾಧಾನ ಪಡಿಸಿದ್ದ. ಆದರೆ ಗ್ರಾಮಕ್ಕೆ ಮರಳಿದ ಮೇಲೂ ಆತ ಅದೇ ವಿಷಯಕ್ಕೆ ಮತ್ತೆ ತಕರಾರು ತೆಗೆದಿದ್ದ. ಆಗ ವೆಂಕಟಯ್ಯ ಮತ್ತು ಚಂದ್ರಯ್ಯ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಸಿಟ್ಟಾದ ವೆಂಕಟಯ್ಯನ ಮಕ್ಕಳು ಪ್ರವೀಣ್ ಹಾಗೂ ಕಿಷ್ಟಯ್ಯ ಚಂದ್ರಯ್ಯನ ಮಕ್ಕಳಾದ ಪರಶುರಾಮುಲು ಮತ್ತು ನಾಗರಾಜು ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದರು.
ಗಂಭೀರ ಗಾಯಗೊಂಡ ಪರಶುರಾಮುಲು ಹಾಗೂ ನಾಗರಾಜು ಅವರನ್ನು ಭುವನಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರುಶುರಾಮುಲು ಅಲ್ಲೇ ಮೃತಪಟ್ಟಿದ್ದಾನೆ. ನಾಗರಾಜುವನ್ನು ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸಲಾರಂಭಿಸಿದ್ದಾರೆ. (ಏಜೆನ್ಸೀಸ್​)
ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

ಕರೊನಾ ಸೋಂಕು ತಗುಲಲಿ ಎಂದು ಇಂಜೆಕ್ಷನ್​ ಚುಚ್ಚಿಕೊಂಡ ಪ್ರಸಿದ್ಧ ಡಾಕ್ಟರ್​!

ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + two =
Remember me
