ಭೋಪಾಲ್​:ಲಾಕ್​ಡೌನ್​ ಅನೇಕರ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಎಷ್ಟೋ ಜನ ಮನೆ, ಕೆಲಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನನ್ನೇ ಕಳೆದುಕೊಂಡಿದ್ದು, ಪೂರ್ತಿ ಕುಟುಂಬ ನೆಮ್ಮದಿಯಿಂದ ದೂರಾಗಿದೆ.
ಇದನ್ನೂ ಓದಿ:ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​
ಮಧ್ಯಪ್ರದೇಶದ ಭೋಪಾಲ್​ನ ಪಮರಿಯಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಿಂಕಿ ಹೆಸರಿನ ಮಹಿಳೆ ಬ್ರಿಜೇಶ್​ ಹೆಸರಿನ ವ್ಯಕ್ತಿಗೆ ಐದು ವರ್ಷದ ಹಿಂದೆಯೇ ಮದುವೆಯಾಗಿದ್ದಳು. ಅವರಿಗೆ ಇಬ್ಬರು ಮಕ್ಕಳಿವೆ. ಬ್ರಿಜೇಶ್​ ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾನೆ. ಕೆಲಸ ಕಳೆದುಕೊಂಡು ಮಾನಸಿಕ ನೋವಿನಲ್ಲಿದ್ದ ಆತನನ್ನು ರಿಂಕಿ ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ತವರು ಮನೆಯಲ್ಲಿ ಎರಡು ತಿಂಗಳ ಕಾಲ ಅವರು ಸಂಸಾರ ನಡೆಸಿದ್ದಾರೆ. ಈ ಸಮಯದಲ್ಲಿ ಬ್ರಿಜೇಶ್​ಗೆ ರಿಂಕಿಯ ತಂಗಿ ಸಲಿ(17) ಜತೆ ಪ್ರೀತಿ ಹುಟ್ಟಿದೆ. ತಂಗಿ ಜತೆ ಗಂಡ ಹೆಚ್ಚು ಸ್ನೇಹದಿಂದ ಇರುವುದನ್ನು ಕಂಡು ರಿಂಕಿ ಪ್ರಶ್ನಿಸಿದ್ದಕ್ಕೆ, ಸಲಿ ನನ್ನ ತಂಗಿಯಿದ್ದಂತೆ ಎಂದು ಸಮಜಾಯಿಷಿ ಕೊಟ್ಟಿದ್ದಾನೆ.
ಇದನ್ನೂ ಓದಿ:VIDEO| ಆತನಿಗೆ ವರದಕ್ಷಿಣೆಯಾಗಿ ಸಿಕ್ಕಿದ್ದು ಎಕೆ-47! ಪಾಕಿಸ್ತಾನದಲ್ಲಿ ಇದೆಲ್ಲ ಕಾಮನ್​ ಅಂತೆ
ಈ ರೀತಿ ನಾದಿನಿ ಜತೆ ಪ್ರೀತಿ ಬೆಳೆಸಿಕೊಂಡ ಬ್ರಿಜೇಶ್​ ಕಳೆದ ಶನಿವಾರ ಸಲಿ ಜತೆ ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ಕುಟುಂಬಸ್ಥರು ಕಾಣೆಯಾಗಿರುವ ದೂರನ್ನು ದಾಖಲಿಸಿದ್ದಾರೆ. ಇಬ್ಬರನ್ನು ಹುಡುಕಿದ ಪೊಲೀಸರು ಮೂರು ದಿನಗಳ ಹಿಂದೆ ಬ್ರಿಜೇಶ್​​ನನ್ನು ರಿಂಕಿ ಜತೆ ಅವರ ಮನೆಗೆ ಕಳುಹಿಸಿದ್ದು, ಸಲಿಯನ್ನು ಆಕೆಯ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಪ್ರೀತಿಯಿಂದ ದೂರಾದ ನೋವಿನಿಂದ ಸಲಿ ಶುಕ್ರವಾರ ವಿಷ ಸೇವಿಸಿದ್ದಾಳೆ. ತಕ್ಷಣ ಕುಟುಂಬಸ್ಥರ ಗಮನಕ್ಕೆ ಬಂದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)
ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
