ನವದೆಹಲಿ :ಮೊಬೈಲ್ ಆ್ಯಪ್​ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ-ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್​​ಮೇಲ್​ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ.
ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್​ ಭರದ್ವಾಜ್​ಅನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್​ ಲೈಫ್’ ಮೊಬೈಲ್ ಆ್ಯಪ್​ಅನ್ನು ಬಳಸಿಕೊಂಡು, ದಕ್ಷಿಣ ಏಷಿಯಾ ದೇಶಗಳ ಮಹಿಳೆಯರನ್ನು ಆನ್​ಲೈನ್​ ಪರಿಚಯ ಮಾಡಿಕೊಳ್ಳುತ್ತಿದ್ದ. ಅವರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಚಿತ್ರಗಳನ್ನು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ನಂತರ ಅವನ್ನು ಲೀಕ್ ಮಾಡುವುದಾಗಿ ಬೆದರಿಸಿ ಇನ್ನಷ್ಟು ಸಾಮಗ್ರಿ ಕಳುಹಿಸಲು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಬ್ಲೂ ಫಿಲ್ಮ್​ ದಂಧೆಯಲ್ಲಿ ಪತಿ ರಾಜ್​ ಕುಂದ್ರಾ ಬಂಧನ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ
ಆರೋಪಿಯು 15 ಮಹಿಳೆಯರನ್ನು ಈ ರೀತಿ ಪುಸಲಾಯಿಸಿದ್ದು, ಮೂವರಿಂದ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಡಿಸಿಪಿ ಆರ್​.ಸತಿಯಸುಂದರಂ ಹೇಳಿದ್ದಾರೆ. ಅಶ್ಲೀಲ ಸಾಮಗ್ರಿಯಿದ್ದ ಆರೋಪಿಯ ಮೊಬೈಲ್​ ಫೋನನ್ನು ಜಪ್ತಿಪಡಿಸಿಕೊಂಡಿರುವ ಪೊಲೀಸರು, ಈ ಪ್ರಕರಣದಲ್ಲಿ ಇತರರು ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಕ್ಯಾಲಿಫೋರ್ನಿಯ ಚುನಾವಣಾ ಕಣಕ್ಕೆ ಭಾರತೀಯ ಅಮೆರಿಕನ್​ ಮಹಿಳೆ

ಕರೊನಾ ಭಯದಿಂದ 15 ತಿಂಗಳು ಮನೆಯಲ್ಲೇ ಬಂಧಿಯಾಗಿದ್ದ ಕುಟುಂಬ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
