ನವದೆಹಲಿ:ಸುಮಾರು 50 ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹಲವಾರು ಜನರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್​ಗಳನ್ನು ಸೃಷ್ಟಿಸಿ ನೆಟ್ಟಿಗರನ್ನು ವಂಚಿಸುತ್ತಿದ್ದ ಸೈಬರ್​ ಕ್ರಿಮಿನಲ್ ಒಬ್ಬನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ಅಡಗಿಕೊಂಡು ಸೈಬರ್ ರಾಕೆಟ್ ನಡೆಸುತ್ತಿದ್ದ 24 ವರ್ಷದ ಯೋಗೇಶ್ ಕುಮಾರ್ ಅಲಿಯಾಸ್ ರಾಮಕುಮಾರ್ ಅನ್ನು ಗುಜರಾತಿನ ವಡೋದರ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಐಪಿಸಿ ಮತ್ತು ಐಟಿ ಕಾಯ್ದೆಯಡಿ ಕೇಸು ದಾಖಲಿಸಿರುವುದಾಗಿ ವಡೋದರ ಪೊಲೀಸ್ ಕಮಿಷನರ್ ಶಮಶೇರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಯೂಟ್ಯೂಬ್​​ನಿಂದ ನೋಟು ಮುದ್ರಿಸುವುದನ್ನು ಕಲಿತವ ಈಗ ಪೊಲೀಸರ ಅತಿಥಿ!
ಆರೋಪಿಯು ಜನಪ್ರಿಯ ಸಾರ್ವಜನಿಕ ವ್ಯಕ್ತಿಗಳ ಸೋಷಿಯಲ್ ಮೀಡಿಯಾ ಪ್ರೊಫೈಲ್​ಗಳನ್ನು ಹ್ಯಾಕ್ ಮಾಡಿ, ಅವರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದ. ಅವರ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ಅವರನ್ನು ಫಾಲೋ ಮಾಡುತ್ತಿದ್ದ ಜನರಿಂದ ಆರ್ಥಿಕ ಸಹಾಯ ಕೇಳುತ್ತಿದ್ದ. ನಂತರ ಬ್ಯಾಂಕ್ ಅಕೌಂಟ್ ಅಥವಾ ಫೋನ್ ಪೇಮೆಂಟ್ ಆ್ಯಪ್ ಮೂಲಕ ಹಣ ವರ್ಗಾಯಿಸುವಂತೆ ಮಾಡುತ್ತಿದ್ದ ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮನೆಯಲ್ಲೇ ಆರ್​.ಟಿ.ಒ. ಕಛೇರಿ ನಡೆಸುತ್ತಿದ್ದ ಖದೀಮರು !

ಮಾನನಷ್ಟ ಮೊಕದ್ದಮೆ : ಅಮಿತ್​ ಷಾಗೆ ಬಂಗಾಳ ಕೋರ್ಟ್ ಸಮನ್ಸ್

ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
