ಪಟನಾ:ಮದುವೆಯಾಗಿ ಏಳು ವರ್ಷದಿಂದ ಸಂಸಾರ ನಡೆಸುತ್ತಿದ್ದ ಗಂಡನೇ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿರುವ ಘಟನೆ ಬಿಹಾರದ ಸುಲ್ತಾನಪುರದಲ್ಲಿ ನಡೆದಿದೆ.
ಸುಲ್ತಾನ್​ಪುರ ನಿವಾಸಿ ಉತ್ತಮ್​ ಮಂಡಲ್​ ಕಳೆದ ಏಳು ವರ್ಷಗಳ ಹಿಂದೆ ಸಪ್ನಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಸಪ್ನಾಳಿಗೆ ಬೇರೊಬ್ಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ರಾಜ್​ಕುಮಾರ್​ ಹೆಸರಿನ ಯುವಕನೊಂದಿಗೆ ಪ್ರೀತಿ ಗಾಢವಾಗಿ ಬೆಳೆದಿದೆ. ಈ ವಿಚಾರ ತಿಳಿದ ನಂತರ ಉತ್ತಮ್​ ಆಕೆಯೊಂದಿಗೆ ಜಗಳವಾಡಿದ್ದಾನೆ. ಆದರೆ ಎಷ್ಟೆಂದರೂ ಕೇಳದ ಸ್ವಪ್ನಾ ಅವನನ್ನೇ ಪ್ರೀತಿಸುವುದಾಗಿ ವಾದಿಸಿದ್ದಾಳೆ.
ಸ್ವಪ್ನಾಳ ತಂದೆ ತಾಯಿಗೂ ಈ ವಿಚಾರ ತಿಳಿಸಿದ ಉತ್ತಮ್​, ಆಕೆಗೆ ಬುದ್ಧಿ ಹೇಳಿಸುವ ಪ್ರಯತ್ನ ಮಾಡಿದ್ದಾನೆ. ಯಾವುದಕ್ಕೂ ಬಗ್ಗದಿದ್ದಾಗ ಖುದ್ದು ತಾನೇ ಆಕೆಗೆ ಮತ್ತೊಂದು ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಮನೆ ಹತ್ತಿರದ ದುರ್ಗಾ ಸ್ಥಳದಲ್ಲಿ ರಾಜ್​ಕುಮಾರ್​ ಮತ್ತು ಸ್ವಪ್ನಾ ಮದುವೆ ಮಾಡಿಸಿದ್ದಾನೆ. ಉತ್ತಮ್ ಸ್ವಪ್ನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇದೀಗ ಆ ಇಬ್ಬರು ಮಕ್ಕಳು ಅಪ್ಪನೊಂದಿಗಿದ್ದಾರೆ. (ಏಜೆನ್ಸೀಸ್​)
ಬ್ಯಾಟರಾಯನಪುರ ಪೊಲೀಸ್​ ಠಾಣೆಯ ಎಎಸ್​ಐ ಕರೊನಾಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
